![]() |
| ಸಭೆಯನ್ನು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಲಾಯಿತು |
ಬಾಣವಾಡಿ : ಸೋಲೂರು ಹೋಬಳಿ ಮಾಗಡಿ ತಾಲ್ಲೂಕಿಗೆ ಸೇರಿರುವ ಬಾಣವಾಡಿ ಗ್ರಾಮದಲ್ಲಿ ದಿನಾಂಕ 28-10-2020 ರಂದು ನಡೆದಿದ್ದ ಹಾಲು ಉತ್ಪಾದಕರ ಸಹಕಾರ ಸಂಘ ದಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯು ಯಶಸ್ವಿಯಾಗಿ ನಡೆದಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೆನ್ನಮಲ್ಲಿಕಾರ್ಜುನಯ್ಯರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಂಘವು ಶುದ್ಧ ಹಾಗೂ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘವು ಯಶಸ್ವಿಯಾಗಿ ಕಾರ್ಯವನ್ನು ಮಾಡಿದ್ದು ಒಳ್ಳೆಯ ಲಾಭವನ್ನುಗಳಿಸಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಕೆಇಬಿ ರಾಜಣ್ಣನವರು ಆಗಮಿಸಿದ್ದರು.
ಇವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದ ರಾಜಣ್ಣನವರು ಈ ಸಹಕಾರ ಸಂಘದ ಅಭಿವೃದ್ಧಿಗೆ ನಾನು ಎಂಥಹ ಪರಿಸ್ಥಿತಿಯಲ್ಲೂ ಕೂಡ ನೆರವಿನ ಹಸ್ತ ನೀಡಲು ಉತ್ಸುಕನಾಗಿರುತ್ತೇನೆ ಎಂದು ತಿಳಿಸಿದರು. ಈ ಸಂಘವು 2019-ಹಾಗೂ 20 ನೇ ಸಾಲಿನಲ್ಲಿ ನಿವ್ವಳ ಲಾಭ 8.15.085.99 ಲಾಭ ಗಳಿಸಿದ್ದು ಸಂಘವು ಪ್ರಗತಿಯತ್ತ ಸಾಗುತ್ತಿದೆ ನಮ್ಮ ಒಕ್ಕೂಟದ ಸವಲತ್ತುಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮತ್ತೊರ್ವ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬೆಂಗಳೂರು ಸಹಕಾರ ಒಕ್ಕೂಟ ಉಪ ವ್ಯವಸ್ಥಾಪಕರಾದ ಜವರಯ್ಯನವರು ಮಾತನಾಡಿ ಈ ಸಹಕಾರ ಸಂಘವು ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರಲಿ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿಗಳಾದ ಪ್ರಕಾಶ್ ರವರು ಕೂಡ ಭಾವಹಿಸಿದ್ದರು.
ಈ ಕಾರ್ಯಕ್ರಮದ ಉಪಾಧ್ಯಕ್ಷರಾದ ಆರಿಫ್ ಉಲ್ಲಾಖಾನ್ ಸೇರಿದಂತೆ ರವಿಶಂಕರ್, ವೆಂಕಟೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.
2019 -20 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ರಾಮಕುಮಾರ್, ಸಚ್ಚಿದಾನಂದ ಮೂರ್ತಿ ಹಾಗ ಚಂದ್ರಪ್ಪ ನವರು ಬಹುಮಾನ ಸ್ವೀಕರಿಸಿದರು.
ಸರ್ವ ಸದಸ್ಯರ ವಾರ್ಷಿಕ ಸಭೆಯ ಮುಖ್ಯ ರೂವಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಗಿರೀಶ್ ರವರು ಉತ್ಪಾದಕರ ಪರಿಶ್ರಮದಿಂದ ಸಹಕಾರ ಸಂಘದ ನಿವ್ವಳ ಲಾಭ ಹೆಚ್ಚಾಗಿದೆ ಎಂದು ತಿಳಿಸಿದರು. ಊರಿನ ಗ್ರಾಮಸ್ಥರ ಪ್ರಕಾರ ಗಿರೀಶ್ ಮುಖ್ಯ ಕಾರ್ಯನಿರ್ವಾಹಕರಾಗಿ ಬಂದ ನಂತರ ಜನಗಳಿಗೆ ಹೆಚ್ಚಿನ ಮಾಹಿತಿ ದೊರೆತಿದೆ ಹಾಗೂ ವಾರ್ಷಿಕ ಆದಾಯವು ಕೂಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ ಗಿರೀಶ್ ರವರು ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು.
