ಕೊರೊನಾ ಲಾಕ್‌ಡೌನ್ ಗ್ರಾಮೀಣ ಭಾಗದಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜೀವನ ನಿರ್ವಹಣೆಗೆ ಹಲವು ರೀತಿಯ ಸಮಸ್ಯೆಗಳನ್ನು ತಂದಿಟ್ಟಿದ್ದು ಸಾಕಷ್ಟು ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ನಡುವೆ ಸರಕಾರ ಕೆಲವೊಂದು ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಕೈ ಜೋಡಿಸುತ್ತಿದ್ದು ಇದೀಗ ರಾಜ್ಯಾದ್ಯಂತ ಮೇಕೆ ಸಾಕಾಣಿದಾರರಿಗೆ ಶೆಡ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಎಲ್ಲ ಗ್ರಾಪಂಗಳ ಮೂಲಕ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.
ವೈಯುಕ್ತಿಕ ಆಧಾರಿತ ಕಾಮಗಾರಿ ಅಡಿಯಲ್ಲಿ ಆಡು(ಮೇಕೆ) ಸಾಕಾಣಿಕೆ ಶೆಡ್ ಕಟ್ಟಡ ನಿರ್ಮಾಣದ ಮಾದರಿ ಅಂದಾಜು ಪಟ್ಟಿಯನ್ನು ತಯಾರಿಸಿ ನಿಗಧಿತ ಹಣಕ್ಕೆ ಅನುಮೋದನೆ ಪಡೆದುಕೊಳ್ಳಲು ಸೂಚಿಸುವಂತೆ ಎಲ್ಲ ಜಿಪಂ ಸಿಇಒಗಳಿಗೆ ಆದೇಶ ರವಾನೆಯಾಗಿದೆ. ಶೆಡ್ ನಿರ್ಮಾಣದ ಅಡಿಪಾಯದಲ್ಲಿ ಸ್ಥಳಕ್ಕೆ ಅನುಗುಣವಾಗಿ ಆರ್‌ಸಿಸಿಯನ್ನು ಉಪಯೋಗಿಸಲು ಅವಕಾಶ ಕಲ್ಪಿಸಿರುವುದು ಒಂದೊಳ್ಳೆ ಸದಾವಕಾಶವಾಗಿದೆ.
ಎಷ್ಟು ಕೊಡ್ತಾರೆ
ಆಡು ಶೆಡ್ ನಿರ್ಮಾಣಕ್ಕೆ ಒಟ್ಟು 68 ಸಾವಿರ ಹಣ ನೀಡಲಿದ್ದು ಆಡು ಸಾಕಾಣಿದಾರರು ತಮ್ಮಲ್ಲಿರುವ ಸ್ಥಳದ ಅನುಕೂಲಕ್ಕೆ ತಕ್ಕಂತೆ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ಶೆಡ್ ಕಟ್ಟಡ ನಿರ್ಮಿಸಿಕೊಳ್ಳಬಹುದಾಗಿದೆ.
ವಲಸೆ ತಡೆಗೆ ಮನರೇಗಾ ಉದ್ಯೋಗ ಬಲ: ಸ್ವಗ್ರಾಮದಲ್ಲೇ ಕೆಲಸಕ್ಕೆ ಒಮ್ಮತದ ನಿರ್ಧಾರ
ಗ್ರಾಮೀಣ ರೈತರಿಗೆ ಬಂಪರ್
ಗ್ರಾಮೀಣ ಭಾಗದಲ್ಲಿ ಸಾಕಷ್ಟು ರೈತರಿಗೆ ಸ್ಥಳದ ಲಭ್ಯತೆ ಇದ್ದರೂ ಸೂಕ್ತ ಹಣಕಾಸಿನ ಸಹಾಯ ಇಲ್ಲದೆ ಶೆಡ್ ಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾಕಷ್ಟು ಮಂದಿ ರೈತರು ಮೇಕೆಗಳನ್ನು ತಮ್ಮ ಮನೆಯ ಹಿತ್ತಲು ಸೇರಿದಂತೆ ಅಲ್ಲಲ್ಲಿ ಕಟ್ಟಿಹಾಕಿಕೊಂಡು ಸಾಕಾಣಿಕೆ ಮಾಡುತ್ತಿದ್ದಾರೆ. ಇವರಿಗೆ ಈ ಯೋಜನೆ ಅನುಕೂಲ ಕಲ್ಪಿಸಲಿದೆ

ಕಳ್ಳರಿಂದ ಬಚಾವ್
ಲಾಕ್‌ಡೌನ್ ನಂತರ ಕುರಿ ಮೇಕೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಮೇಕೆ ಶೆಡ್ ನಿರ್ಮಾಣದಿಂದಾಗಿ ಮೇಕೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ. ರಾತ್ರಿ ವೇಳೆ ಸೂಕ್ತ ಭದ್ರತೆಯಿಲ್ಲದೆ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿರುವ ಮೇಕೆಗಳನ್ನು ಟಾಟಾ ಏಸ್ ನಂಥ ವಾಹನಗಳಲ್ಲಿ ಬಂದು ಸದ್ದಿಲ್ಲದೆ ತುಂಬಿಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿವೆ. ಶೆಡ್ ನಿರ್ಮಾಣವಾದರೆ ಅವುಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ಸಾಧ್ಯವಾಗಲಿದೆ.

ಕೃಪೆ ವಿಜಯ ಕರ್ನಾಟಕ