ಶುಕ್ರವಾರ, ಅಕ್ಟೋಬರ್ 30, 2020

ಹಾಲು ಉತ್ಪಾದಕರ ಸಹಕಾರ ಸಂಘ ಬಾಣಾವಾಡಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ

ಸಭೆಯನ್ನು ದೀಪ ಬೆಳಗುವುದರ ಮುಖಾಂತರ ಉದ್ಘಾಟಿಸಲಾಯಿತು

ಬಾಣವಾಡಿ : ಸೋಲೂರು ಹೋಬಳಿ ಮಾಗಡಿ ತಾಲ್ಲೂಕಿಗೆ ಸೇರಿರುವ ಬಾಣವಾಡಿ ಗ್ರಾಮದಲ್ಲಿ ದಿನಾಂಕ 28-10-2020 ರಂದು ನಡೆದಿದ್ದ ಹಾಲು ಉತ್ಪಾದಕರ ಸಹಕಾರ ಸಂಘ ದಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯು ಯಶಸ್ವಿಯಾಗಿ ನಡೆದಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೆನ್ನಮಲ್ಲಿಕಾರ್ಜುನಯ್ಯರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸಂಘವು ಶುದ್ಧ ಹಾಗೂ ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘವು ಯಶಸ್ವಿಯಾಗಿ  ಕಾರ್ಯವನ್ನು  ಮಾಡಿದ್ದು ಒಳ್ಳೆಯ ಲಾಭವನ್ನುಗಳಿಸಿದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಕೆಇಬಿ ರಾಜಣ್ಣನವರು ಆಗಮಿಸಿದ್ದರು.
ಇವರು  ಕಾರ್ಯಕ್ರಮವನ್ನು ಕುರಿತು ಮಾತನಾಡಿದ ರಾಜಣ್ಣನವರು ಈ ಸಹಕಾರ ಸಂಘದ ಅಭಿವೃದ್ಧಿಗೆ ನಾನು ಎಂಥಹ ಪರಿಸ್ಥಿತಿಯಲ್ಲೂ ಕೂಡ ನೆರವಿನ ಹಸ್ತ ನೀಡಲು ಉತ್ಸುಕನಾಗಿರುತ್ತೇನೆ ಎಂದು ತಿಳಿಸಿದರು. ಈ ಸಂಘವು 2019-ಹಾಗೂ 20 ನೇ ಸಾಲಿನಲ್ಲಿ ನಿವ್ವಳ ಲಾಭ 8.15.085.99 ಲಾಭ ಗಳಿಸಿದ್ದು ಸಂಘವು  ಪ್ರಗತಿಯತ್ತ ಸಾಗುತ್ತಿದೆ ನಮ್ಮ ಒಕ್ಕೂಟದ ಸವಲತ್ತುಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದ ಮತ್ತೊರ್ವ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಬೆಂಗಳೂರು ಸಹಕಾರ ಒಕ್ಕೂಟ ಉಪ ವ್ಯವಸ್ಥಾಪಕರಾದ ಜವರಯ್ಯನವರು ಮಾತನಾಡಿ ಈ ಸಹಕಾರ ಸಂಘವು ಹೀಗೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರಲಿ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ವಿಸ್ತರಣಾ ಅಧಿಕಾರಿಗಳಾದ ಪ್ರಕಾಶ್ ರವರು ಕೂಡ ಭಾವಹಿಸಿದ್ದರು.

ಈ ಕಾರ್ಯಕ್ರಮದ ಉಪಾಧ್ಯಕ್ಷರಾದ ಆರಿಫ್ ಉಲ್ಲಾಖಾನ್ ಸೇರಿದಂತೆ ರವಿಶಂಕರ್, ವೆಂಕಟೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.

2019 -20 ನೇ ಸಾಲಿನಲ್ಲಿ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ ರಾಮಕುಮಾರ್, ಸಚ್ಚಿದಾನಂದ ಮೂರ್ತಿ ಹಾಗ ಚಂದ್ರಪ್ಪ ನವರು ಬಹುಮಾನ ಸ್ವೀಕರಿಸಿದರು.


ಸರ್ವ ಸದಸ್ಯರ ವಾರ್ಷಿಕ ಸಭೆಯ ಮುಖ್ಯ ರೂವಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಾದ ಗಿರೀಶ್ ರವರು  ಉತ್ಪಾದಕರ  ಪರಿಶ್ರಮದಿಂದ ಸಹಕಾರ ಸಂಘದ  ನಿವ್ವಳ ಲಾಭ ಹೆಚ್ಚಾಗಿದೆ ಎಂದು ತಿಳಿಸಿದರು. ಊರಿನ ಗ್ರಾಮಸ್ಥರ ಪ್ರಕಾರ ಗಿರೀಶ್ ಮುಖ್ಯ ಕಾರ್ಯನಿರ್ವಾಹಕರಾಗಿ ಬಂದ ನಂತರ ಜನಗಳಿಗೆ ಹೆಚ್ಚಿನ ಮಾಹಿತಿ ದೊರೆತಿದೆ ಹಾಗೂ ವಾರ್ಷಿಕ ಆದಾಯವು ಕೂಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ  ಗಿರೀಶ್ ರವರು ಕಾರ್ಯಕ್ರಮಕ್ಕೆ ವಂದನಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು.


ಶುಕ್ರವಾರ, ಅಕ್ಟೋಬರ್ 23, 2020

ಪಂಚಗವ್ಯ

ಪಂಚಗವ್ಯ  :




ಪಂಚಗವ್ಯ ಎಂಬ ಪದವು ಸಾವಯವ ಕೃಷಿಯಲ್ಲಿ ಬಹುವಾಗಿ ಬಳಕೆಯಾಗುವ ಪದ. ಸಂಸ್ಕøತದಲ್ಲಿ ಪಂಚಗವ್ಯ ಎಂದರೆ ಆಕಳಿಂದ ಬರುವ ಐದು ಉತ್ಪನ್ನಗಳ (ಆಕಳ ಸಗಣಿ, ಗಂಜಳ, ಹಾಲು,ಮೊಸರು ಮತ್ತು ತುಪ್ಪವನ್ನು 5:3:2:2:1 ರ ಅನುಪಾತದಲ್ಲಿ) ಮಿಶ್ರಣ ಎಂದರ್ಥ. ಈ ಎಲ್ಲಾ 5 ಉತ್ಪನ್ನಗಳನ್ನು ಬಿಡಿಯಾಗಿ ಗವ್ಯ ಎಂದು ಮತ್ತು ಒಟ್ಟಾಗಿ ಪಂಚಗವ್ಯ ಎಂದು ಕರೆಯುತ್ತಾರೆ. ಪಂಚಗವ್ಯದಲ್ಲಿ ಮುಖ್ಯ ಪೋಷಕಾಂಶಗಳು ಮತ್ತು ಬೆಳವಣಿಗೆ ಚೋದಕಗಳಿದ್ದು (ಇಂಡೋಲ್ ಅಸಿಟಿಕ್ ಆಮ್ಲ ಮತ್ತು ಗೊಬ್ಬರ್ಲಕ್ ಆಮ್ಲ) ಬೆಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಪಂಚಗವ್ಯದ ವಸ್ತುಗಳನ್ನು ಮಿಶ್ರಣ ಮಾಡಿ 7-9 ದಿನಗಳ ಕಾಲ ಮಣ್ಣಿನ ಹರವಿಯಲ್ಲಿ ಪರಿಪಾಕಾವಸ್ತೆಗೆ ಬಿಡಬೇಕು. ಪ್ರತಿದಿನವೂ 7-9 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ 2 ಬಾರಿ ಕೋಲಿನಿಂದ ಬಲದಿಂದ ಎಡಕ್ಕೆ ಎಡದಿಂದ ಬಲಕ್ಕೆ ವೃತ್ತಾಕಾರವಾಗಿ ತಿರುಗಿಸಬೇಕು. ಇದನ್ನು ಮುಚ್ಚಳದಿಂದ ಮುಚ್ಚಿ ನೆರಳಲ್ಲಿ ಶೇಖರಿಸಬೇಕು

ಬಳಸುವ ಹಂತ / ಅವಧಿ

  1. ಹೂ ಬಿಡುವ ಮುಂಚಿನ ಹಂತ :
  2. 15 ದಿನಗಳಿಗೊಮ್ಮೆ ಬೆಳೆಯ ಅವಧಿಗೆ ಅನುಗುಣವಾಗಿ 2 ಬಾರಿ ಸಿಂಪರಣೆಯನ್ನು ಮಾಡಬೇಕು. ಶೇ. 1 ರಷ್ಟು ಪಂಚಗವ್ಯವನ್ನು ಬಿತ್ತನೆ ಮಾಡಿದ 30 ದಿನಗಳವರೆಗಿನ ಸಸ್ಯಗಳಿಗೆ ಸಂಪಡಿಸಬೇಕು. ಮತ್ತು ಶೇ. 3 ರಷ್ಟು ಪಂಚಗವ್ಯವನ್ನು ಬಿತ್ತನೆ ಮಾಡಿದ 30 ದಿನಗಳ ನಂತರದ ಬೆಳೆಯ ಹಂತಗಳಿಗೆ ಸಿಂಪಡಿಸಬೇಕು.

  3. ಹೂ ಬಿಡುವ ಮತ್ತು ಕಾಯಿ ಹೂಡುವ ಹಂತ : 10 ದಿನಗಳಿಗೊಮ್ಮೆ 2 ಬಾರಿ ಸಿಂಪರಣೆ ಮಾಡಬೇಕು.
  4. ಹಣ್ಣು / ಕಾಯಿ ಬಲಿಯುವ ಹಂತ :  ಒಂದು ಅವಧಿಗೆ ಕಾಯಿ ಬಲಿಯುವ ಅವಧಿಯಲ್ಲಿ ಸಿಂಪಡಿಸಬೇಕು.

ಬೀಜೋಪಚಾರ :

ಶೇ. 3 ರ ಪಂಚಗವ್ಯ ದ್ರಾವಣವನ್ನು ಬೀಜೋಪಚಾರ ಅಥವಾ ಸಸಿಗಳನ್ನುನಾಟಿ ಮಾಡುವುದಕ್ಕಿಂತ ಮುಂಚೆ ಪಂಚಗವ್ಯ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬಹುದು. ದ್ರಾವಣದಲ್ಲಿ 20 ನಿಮಿಷ ಅದ್ದುವುದು ಸೂಕ್ತ, ಶುಂಠಿ ಮತ್ತು ಅರಿಶಿಣ ಬೆಳೆಗಳ ಬೇರುಕಾಂಡ ಮತ್ತು ಕಬ್ಬು ಬೆಳೆಯ ಬೀಜ ಬೇರನ್ನು ನಾಟಿ ಮಾಡುವುದಕ್ಕಿಂತ ಮುಂಚೆ 30 ನಿಮಿಷಗಳ ಕಾಲ ಪಂಚಗವ್ಯ ದ್ರಾವಣದಲ್ಲಿ ಅದ್ದುವುದು ಸೂಕ್ತ.

ಜೀವಾಮೃತ  :

ಜೀವಾಮೃತವು ಸಸ್ಯಗಳ ಬೆಳವಣಿಗೆಯ ಪ್ರಚೋದಕಗಳಲ್ಲೊಂದಾಗಿದೆ. ಇದರಲ್ಲಿ ಅನೇಕ ರೀತಿಯ ಉಪಯುಕ್ತ ಸೂಕ್ಷ್ಮಜೀವಿಗಳಿದ್ದು ಸಸ್ಯಗಳಿಗೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಸಣ್ಣ ರೈತರ ಏಳಿಗೆಗೆ ಸಂಜೀವಿನಿಯಾಗಿದೆ. ಕ್ರಿಯೆಯನ್ನು ಉತ್ತೇಜಿಸಿ ಸಸ್ಯಗಳ ಬೆಳವಣಿಗೆಗೆ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಸಿಗುವಂತೆ ಮಾಡುತ್ತದೆ. ಸಾರಜನಕವನ್ನು ಒದಗಿಸುವ ಸೂಕ್ಷ್ಮಜೀವಿಗಳಾದ ಅಜಟೋಬ್ಯಾಕ್ಟರ್, ಅಸಿಟೋಬ್ಯಾಕ್ಟರ್, ಅಜೋಸಟೈರಿಲಂ, ರಂಜಕವನ್ನು ಕರಗಿಸುವ ದುಂಡಾಣುವಾದ ಬೆಸಿಲಸ್ ಸಬ್‍ಟಿಲಿಸ್ ಸಗಣಿಯಲ್ಲಿರುತ್ತದೆ.

ಬಳಕೆ ಮತ್ತು ವಿಧಾನ

  1. ಒಂದು ಎಕರೆ ಪ್ರದೇಶಕ್ಕೆ 50-200 ಲೀಟರ್‍ನಷ್ಟು ಜೀವಾಮೃತವು ಬೇಕಾಗುತ್ತದೆ. ಮತ್ತು ತೇವಾಂಶ ಇರುವಾಗ ಮಾತ್ರ ಭೂಮಿಗೆ ಹಾಕಬೇಕು.
  2. 15 ದಿನಗಳಿಗೊಮ್ಮೆ ಇದನ್ನು ಬಳಸಬೇಕು. ಹಾಗೂ ಸಸ್ಯ ಬೆಳವಣಿಗೆಯ ಹಂತದಲ್ಲಿ ಹೂ ಬಿಡುವ ಮತ್ತು ಕಾಳು ಕಟ್ಟುವ ಹಂತದಲ್ಲಿ ( ಪ್ರತಿ ಸಸ್ಯಕ್ಕೂ 250 ಮಿ.ಲೀ. ಹಾಕಬೇಕು) ಬಳಸಬೇಕು.
  3. ಜೀವಾಮೃತವನ್ನು ಭತ್ತದ ಬೆಳೆಗೆ ನೀರಿನ ಜೊತೆ ಬಿಡಬಹುದು.
  4. ಜೀವಾಮೃತವನ್ನು ಜಮೀನಿನ ಕಾಲುವೆಗಳಲ್ಲಿ ನೀರಿನ ಮುಖಾಂತರ ಹೊಡಬಹುದು. ಜೀವಾಮೃತವನ್ನು ಹತ್ತಿ ಬಟ್ಟೆಯಿಂದ ಸೋಸಿ ನೀರಿಗೆ ಬೆರೆಸಬೇಕು.
  5. ಎಲ್ಲಾ ವಯಸ್ಸಿನ ಹಣ್ಣಿನ ಮರಗಳಿಗೆ 25-30 ಲೀಟರ್ ಜೀವಾಮೃತವನ್ನು 200 ಲೀಟರ್ ನೀರಿನಲ್ಲಿ ಬೆರೆಸಿ ಬಳಸಬಹುದು.

 

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ  ವಿಜ್ಞಾನಿಗಳು ಭತ್ತ, ರಾಗಿ, ಹಸಿ ಮೆಣಸಿನಕಾಯಿಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳವರಿಯನ್ನು ಹೆಚ್ಚಿಸುವಲ್ಲಿ ಜೀವಾಮೃತವು ಸಹಕಾರಿಯಾಗಿದೆಯೆಂದು ಮನಗೊಂಡಿದ್ದಾರೆ.

ಮೂಲ: ದೂರ ಶಿಕ್ಷಣ ಘಟಕ ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು

ಗುರುವಾರ, ಅಕ್ಟೋಬರ್ 22, 2020

ಸಿರಿಧಾನ್ಯಗಳ ಪಟ್ಟಿಗೆ ಚಿಯಾ, ಕ್ವಿನೊವಾ

ಬಹುಬೇಡಿಕೆ ಇರುವ ಟೆಫ್, ಚಿಯಾ ಮತ್ತು ಕ್ವಿನೊವಾ ಬೆಳೆಗಳನ್ನೂ ಈಗ ಸರ್ಕಾರದ “ರೈತ ಸಿರಿ’ ಯೋಜನೆಗೆ ಸರ್ಕಾರ ಸೇರ್ಪಡೆ ಮಾಡಿದ್ದು, ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲು ಶಿಫಾರಸು ಮಾಡಲಾಗಿದೆ. ಯೋಜನೆ ಅಡಿ ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಹಾಗೂ ಗರಿಷ್ಠ 20 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ಸಿರಿಧಾನ್ಯಗಳ ಸಾಲಿಗೆ ಟೆಫ್, ಚಿಯಾ, ಕ್ವಿನೊವಾ ಕೂಡ ಸೇರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದಹಾಗೆ, ಉದ್ದೇಶಿತ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೆಲೆ ಇದ್ದು, ಕೆಜಿಗೆ ನೂರಾರು ರೂ. ಬೆಲೆ ಇದೆ.

ಶುಕ್ರವಾರ, ಅಕ್ಟೋಬರ್ 16, 2020

ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ

ನೀರು ನುಗ್ಗಿ ಸಾವಿರಾರು ರೂ ಮೌಲ್ಯದ ದವಸ ಧಾನ್ಯಗಳನ್ನು ಕಳೆದುಕೊಂಡು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಪುಸ್ತಕಗಳನ್ನು ಕಳೆದುಕೊಂಡು ಹೈರಾಣಾಗಿದ್ದಾರೆ. ಮಳೆ ನಿಂತು ಹೋದ ಮೇಲೆ ಈ ಗ್ರಾಮ ಜನರ ಬದುಕು ಬೀದಿಗೆ ಬಿದ್ದಿದೆ. ಮಹಾಮಳೆಯಿಂದ ದವಸ, ಧಾನ್ಯಗಳನ್ನು, ರೈತರು ಬೆಳೆದ ಬೆಳೆ ದನಕರುಗಳು ಕುರಿ ಮೇಕೆಗಳನ್ನು ಸೇರಿದಂತೆ ಎಲ್ಲವನ್ನು ಗ್ರಾಮಸ್ಥರು ಕಳೆದುಕೊಂಡಿದ್ದಾರೆ.

ನಮ್ಮ ಉತ್ತರ ಕರ್ನಾಟಕದ ಜನ ನೆರೆಯಿಂದ ತತ್ತರಿಸಿಹೋಗಿದ್ದಾರೆ ಇತ್ತ ರಾಜಕಾರಣಿಗಳು ಉಪಚುನಾವಣೆಯ ಗುಂಗಿನಲ್ಲಿದ್ದಾರೆ
ರಾಜಕಾರಣಿಗಳಿಗೆ ಬೇಕಿರುವುದು ಜನರ ಮತ ಹೊರತು ಜನರ ಹಿತವಲ್ಲ


ಬುಧವಾರ, ಅಕ್ಟೋಬರ್ 14, 2020

ಗಾದೆಗಳು

 ವೇದ ಸುಳ್ಳಾದರೂ ಗಾದೆ ಸುಳ್ಳಾಗದು.



೧. ಹಿತ್ತಲ ಗಿಡ ಮದ್ದಲ್ಲ.


೨. ಮಾಡಿದ್ದುಣ್ಣೋ ಮಹರಾಯ.


೩. ಕೈ ಕೆಸರಾದರೆ ಬಾಯಿ ಮೊಸರು.


೪. ಹಾಸಿಗೆ ಇದ್ದಷ್ತು ಕಾಲು ಚಾಚು.


೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.


೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.


೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.


೮. ಮನೇಲಿ ಇಲಿ, ಬೀದೀಲಿ ಹುಲಿ.


೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.


೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.


೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.


೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.


೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.


೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.


೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.


೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.


೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.


೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.


೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.


೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.


೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.


೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.


೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.


೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.


೨೫. ದೇವರು ವರ ಕೊಟ್ರು ಪೂಜಾರಿ ಕೊಡ.


೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.


೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.


೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.


೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.


೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.


೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?


೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.


೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.


೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.


೩೫. ಕಾಸಿಗೆ ತಕ್ಕ ಕಜ್ಜಾಯ.


೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.


೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.


೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.


೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.


೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.


೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು


 ಹಾಳು.


೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.


೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.


೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.


೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.


೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.


೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.


೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?


೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.


೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.


೫೧. ಮಾತು ಬೆಳ್ಳಿ, ಮೌನ ಬ೦ಗಾರ.


೫೨. ಎಲ್ಲಾರ ಮನೆ ದೋಸೆನೂ ತೂತೆ.


೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.


೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.


೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.


೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.


೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.


೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.


೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?


೬೦. ಮನೆಗೆ ಮಾರಿ, ಊರಿಗೆ ಉಪಕಾರಿ.


೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?


೬೨. ಅಲ್ಪರ ಸ೦ಘ ಅಭಿಮಾನ ಭ೦ಗ.


೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.


೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.


೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?


೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.


೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?


೬೭. ಗಾಳಿ ಬ೦ದಾಗ ತೂರಿಕೋ.


೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.


೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.


೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.


೭೧. ದುಡ್ಡೇ ದೊಡ್ಡಪ್ಪ.


೭೨. ಬರಗಾಲದಲ್ಲಿ ಅಧಿಕ ಮಾಸ.


೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?


೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ


 ೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.


೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.


೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.


೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.


೭೯. ಕ೦ತೆಗೆ ತಕ್ಕ ಬೊ೦ತೆ.


೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.


೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.


೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.


೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.


೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.


೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.


೮೭. ಓದುವಾಗ ಓದು, ಆಡುವಾಗ ಆಡು.


೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.


೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.


೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.


೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.


೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.


೯೩. ಮುಖ ನೋಡಿ ಮಣೆ ಹಾಕು.


೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.


೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?


೯೬. ತು೦ಬಿದ ಕೊಡ ತುಳುಕುವುದಿಲ್ಲ.


೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.


೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?


೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.


೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.


೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.


೧೦೨. ದುಡಿಮೆಯೇ ದುಡ್ಡಿನ ತಾಯಿ.


೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.


೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.


೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?


೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.


೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.


೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.


೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.


೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.


೧೧೧. ಹೊರಗೆ ಥಳಕು ಒಳಗೆ ಹುಳಕು.


೧೧೨. ಸ೦ಕಟ ಬ೦ದಾಗ ವೆ೦ಕಟರಮಣ.


೧೧೩. ಯಥಾ ರಾಜ ತಥಾ ಪ್ರಜಾ.


೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.


೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.


೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.


೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.


೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.


೧೧೯. ಬಡವನ ಕೋಪ ದವಡೆಗೆ ಮೂಲ.


೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,


ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.


೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.


೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.


೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.


೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.


೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.


೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.


೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.


೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.


೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.


೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.


೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು


 ಸ೦ಬ೦ಧ ಅ೦ದ ಹಾಗೆ.


೧೩೨. ನಾರಿ ಮುನಿದರೆ ಮಾರಿ.


೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.


೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.


೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.


೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.


೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.


೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.


೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.


೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.


೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.


೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.


೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.


೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.


೧೪೫. ಬಾಯಿ ಬಿಟ್ಟರೆ ಬಣ್ಣಗೇಡು.


೧೪೬. ಸ೦ಕಟ ಬ೦ದಾಗ ವೆ೦ಕಟರಮಣ.


೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.


೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.


೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.


೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.


೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.


೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.


೧೫೩. ಮೀಸೆ ಬ೦ದವನು ದೇಶ ಕಾಣ.


೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.


೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.


೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.


೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.


೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.


೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.


೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?


೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.


೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.


೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.


೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?


೧೬೫. ಕಾಸಿದ್ದರೆ ಕೈಲಾಸ.


೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.


೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.


೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.


೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.


೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.


೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.


೧೭೨. ಹೂವಿನ ಜೊತೆ ದಾರ ಮುಡಿಯೇರಿತು.


೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.


೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.


೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.


೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.


೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.


೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.


೧೭೯. ಅತ್ತ ದರಿ, ಇತ್ತ ಪುಲಿ.


೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.


೧೮೧. ಆಪತ್ತಿಗಾದವನೇ ನೆ೦ಟ.


೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.


೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.


೧೮೪. ಎಲ್ಲಾ ಜಾಣ, ತುಸು ಕೋಣ.


೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.


೧೮೬. ಮೂಗಿಗಿ೦ತ ಮೂಗುತ್ತಿ ಭಾರ.


೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.


೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.


೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.


೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.


೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.


೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?


೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.


೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.


೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.


೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.


೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.


೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.


೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.


೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.


೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?


೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.


೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.


೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.


೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.


೨೦೬. ಮಹಾಜನಗಳು ಹೋದದ್ದೇ ದಾರಿ.


೨೦೭. ಅರವತ್ತಕ್ಕೆ ಅರಳು ಮರಳು.


೨೦೮. ಜನ ಮರುಳೋ ಜಾತ್ರೆ ಮರುಳೋ.


೨೦೯. ಕು೦ಟನಿಗೆ ಎ೦ಟು ಚೇಶ್ಟೆ.


೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.


೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.


೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.


೨೧೩. ಕೈಗೆಟುಕದ ದ್ರಾಕ್ಷಿ ಹುಳಿ.


೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.


೨೧೫. ದುಷ್ಟರ ಕ೦ಡರೆ ದೂರ ಇರು.


೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.


೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.


೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.


೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.


೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.


೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.


೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.


೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.


೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.


೨೨೫. ರವಿ ಕಾಣದ್ದನ್ನು ಕವಿ ಕ೦ಡ.


೨೨೬. ಕೆಟ್ಟು ಪಟ್ಟಣ ಸೇರು.


೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.


೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.


೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?


೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.


೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.


೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.


೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.


೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.


೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?


೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.


೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.


೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.


೨೩೯. ತಾನೂ ತಿನ್ನ, ಪರರಿಗೂ ಕೊಡ.


೨೪೦. ಗ೦ಡಸಿಗೇಕೆ ಗೌರಿ ದುಃಖ ?


೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.


೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.


೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.


೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.


೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.


೨೪೬. ಅತಿ ಆಸೆ ಗತಿ ಕೇಡು.


೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.


೨೪೮. ಅತಿಯಾದರೆ ಆಮೃತವೂ ವಿಷವೇ.


೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.


೨೫೦. ಆತುರಗಾರನಿಗೆ ಬುದ್ಧಿ ಮಟ್ಟ.


೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.


೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.


೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.


೨೫೪. ಉ೦ಡೂ ಹೋದ, ಕೊ೦ಡೂ ಹೋದ.


೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.


೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.


೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.


೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.


೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.


೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.


೨೬೧. ಲ೦ಘನ೦ ಪರಮೌಶಧ೦.


೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

ಸೋಮವಾರ, ಅಕ್ಟೋಬರ್ 12, 2020

ಕುರಿ ಸಾಕಾಣಿಕೆ

ಹಳ್ಳಿಯ  ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. 

ಪರಿಚಯಪರಿಚಯ
ಸಂಪಾದಿಸಿ

ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರವನ್ನು ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ. ಕರ್ನಾಟಕ ರಾಜ್ಯವು ೧,೯೧,೭೯೧ ಚ.ಕಿ.ಮೀ, ವಿಸ್ತಾರವನ್ನು ಹೊಂದಿದ್ದು, ದೇಶದಲ್ಲಿ ೬ನೇ ಅತಿ ದೊಡ್ಡ ರಾಜ್ಯವಾಗಿದೆ. ೨೦೦೩ನೇ ಜಾನುವಾರು ಗಣತಿಯ ಪ್ರಕಾರ ಕನಾಟಕ ರಾಜ್ಯದಲ್ಲಿ ೭೨.೫೫ ಲಕ್ಷ ಕುರಿಗಳು ಮತ್ತು ೪೪.೮೩ ಲಕ್ಷ ಮೇಕೆಗಳು ಇವೆ. ಕರ್ನಾಟಕದಲ್ಲಿರುವ ೨೭ ಜಿಲ್ಲೆಗಳಲ್ಲಿ ೯.೦೨ ಲಕ್ಷ ಕುರಿಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ತುಮಕೂರು ೮.೮೪ ಲಕ್ಷ, ಚಿತ್ರದುರ್ಗ ೭.೧೫ ಲಕ್ಷ ಮತ್ತು ಕೋಲಾರ ೬.೩೩ ಲಕ್ಷ ಸಂಖ್ಯೆ ಹೊಂದಿದ್ದು, ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿರುತ್ತವೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಕುರಿಗಳ ಸಾಂದ್ರತೆ ಅತ್ಯಂತ ವಿರಳವಾಗಿದೆ. ರಾಜ್ಯದಲ್ಲಿ ಕುರಿ ಸಾಕಾಣಿಕೆಗೆ ಒಣ ವಾತಾವರಣವಿರುವ ಮತ್ತು ೧೫ ರಿಂದ ೨೦ ಅಂಗುಲ ಮಳೆ ಬೀಳುವ ಭಾಗಗಳು ಉತ್ತಮವಾಗಿವೆ. ಹೆಚ್ಚು ಮಳೆ ಬೀಳುವ ಶೀತ ವಾಯುಗುಣದ ಅರಣ್ಯ ಪ್ರದೇಶವು ಕುರಿ ಸಾಕಾಣೆಕೆಗೆ ಯೋಗ್ಯವಲ್ಲ. ನಮ್ಮ ರಾಜ್ಯದಲ್ಲಿ ಕುರಿಗಳನ್ನು ಮುಖ್ಯವಾಗಿ ಮಾಂಸ, ಉಣ್ಣೆ, ಚರ್ಮ ಮತ್ತು ಗೊಬ್ಬರಗಳಿಗಾಗಿ ಸಾಕುತ್ತಾರೆ. ಕುರಿ ಸಾಕಾಣಿಕೆ ಸುಲಭ ಹಾಗೂ ಲಾಭದಾಯಕ. ಕುರಿಗಳು ಎಂತಹ ಸಂಕಷ್ಟ ಸಮಯದಲ್ಲೂ ಬದುಕಿ ಉಳಿಯಬಲ್ಲವು. ಕುರಿಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ. ಆಧುನಿಕ ತಂತ್ರಜ್ಞಾನ, ಮೇವು ವಿಜ್ಞಾನ ಹಾಗೂ ತಳಿಯ ಅಭಿವೃದ್ಧಿ ಜ್ಞಾನವನ್ನು ಅಳವಡಿಸಿ ಕುರಿಗಳನ್ನು ಸಾಕಿದರೆ ಹೆಚ್ಚಿನ ಲಾಭ ಗಳಿಸಬಹುದು. ಇಂದು ಕುರಿ ಸಾಕಾಣಿಕೆಯು ಅಲೆಮಾರಿ ಜನರಿಗೆ, ಕೃಷಿ ಕೂಲಿಗಾರರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದವರಿಗೆ ಜೀವಂತ ಚಲಿಸುವ ನಿಧಿಗೆ ಸಮಾನವಾಗಿದೆ.

ಕರ್ನಾಟಕದಲ್ಲಿ ಕುರಿ ಅಭಿವೃಧಿಯ ಕಾರ್ಯಕ್ರಮಗಳುಸಂಪಾದಿಸಿ

  1. ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಕುರಿಗಾರರ ಹಿತರಕ್ಷಣೆ ಕಾಯುವ ಸಲುವಾಗಿ ೧೯೭೫ನೇ ಇಸವಿಯಲ್ಲಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃಧಿ ಮಂಡಳಿಯನ್ನು ಸ್ಥಾಪಿಸಿದ್ದು, ಸದರಿ ಮಂಡಳಿಯ ಚಟುವಟಿಕೆಗಳನ್ನು ಬಲಪಡಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ದಿನಾಂಕ ೧.೪.೨೦೦೨ ರಿಂದ ಜಾರಿಗೆ ಬರುವಂತೆ ಮಂಡಳಿಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃಧಿ ನಿಗಮ ನಿಯಮಿತವನ್ನಾಗಿ ಪರಿವರ್ತಿಸಿದೆ.
  2. ಈ ಹಿಂದೆ ಪಟ್ಟಿ ಮಾಡಿ ತಿಳಿಸಿದ ತಳಿಗಳು ಸ್ಥಳೀಯ ತಳಿಗಳಾಗಿದ್ದು ಇವುಗಳ ಉಣ್ಣೆ ಒರಟಾಗಿದ್ದು ಉಪಯುಕ್ತತೆ ಕಡಿಮೆಯಿರುತ್ತದೆ. ಇವುಗಳ ಸರಾಸರಿ ದೇಹ ತೂಕ ಕಡಿಮೆಯಾಗಿರುವುದರಿಂದ ಮಾಂಸದ ಗುಣಮಟ್ಟ ಹಾಗೂ ಇಳುವರಿಯನ್ನು ಹೆಚ್ಚಿಸುವ ಸಲುವಾಗಿ ಮಿಶ್ರ ತಳಿ ಸಂವರ್ಧನೆ ಅತಿ ಅವಶ್ಯಕವಿರುತ್ತದೆ. ಈ ಬಗ್ಗೆ ಸರಕಾರ ಹಮ್ಮಿಕೊಂಡಿರುವ ಪ್ರಮುಖ ಪ್ರಯತ್ನವೆಂದರೆ ನಮ್ಮ ರಾಜ್ಯದ ತಳಿಗಳನ್ನು ವಿದೇಶಿ ತಳಿಗಳೊಂದಿಗೆ ಸಂಕರಗೊಳಿಸಿ ಮಿಶ್ರ ತಳಿ ಅಭಿವೃದ್ಧಿಪಡಿಸುವುದು. ಆದರೆ ಈ ಕಾರ್ಯಕ್ರಮಕ್ಕೆ ಅನೇಕ ಅಡಚಣೆಗಳಿವೆ.

ಪ್ರಮುಖ ಸಮಸ್ಯೆಯೆಂದರೆ ರಾಜ್ಯದ ಹೆಚ್ಚಿನ ಸಂಖ್ಯೆ ಕುರಿಗಳಿಗೆ ಬೇಕಾಗಿರುವ ಸಂಖ್ಯೆಯ ಟಗರುಗಳನ್ನು ಒದಗಿಸಬೇಕಾಗಿರುವುದು. ಈ ಟಗರನ್ನು ಒದಗಿಸುವ ಕೇಂದ್ರಗಳೆಂದರೆ ರಾಜ್ಯದಲ್ಲಿರುವ ೬ ಕುರಿ ಸಂವರ್ದ್ಧನಾ ಕ್ಷೇತ್ರಗಳು. ಈ ಕ್ಷೇತ್ರಗಳಲ್ಲಿ ಉತ್ಪಾದಿಸಲಾಗುವ ಒಟ್ಟು ಟಗರುಗಳ ಉತ್ಪಾದನೆ ರಾಜ್ಯಾದ್ಯಂತ ಇರುವ ಅವಶ್ಯಕತೆಗೆ ಏನೇನೂ ಸಾಲದು. ಜಾನುವಾರುಗಳಲ್ಲಿ ಕೃತಕ ಗರ್ಭಧಾರಣೆ ಪ್ರಮುಖ ತಳಿ ಸಂವರ್ಧನಾ ಅಂಗವಾಗಿರುವುದು ಸಾಬೀತಾಗಿದೆ. ಈ ಮಹತ್ವದ ವಿಜ್ಞಾನವನ್ನು ಕುರಿಗಳು ಸಂವರ್ಧನೆಯಲ್ಲೂ ಅಳವಡಿಸಬೇಕಾಗಿದೆ. ಈ ಬಗ್ಗೆ ರಾಜ್ಯದ ಹಲವೆಡೆ ನಡೆದ ಪ್ರಯೋಗಗಳು ಉತ್ತಮ ಪ್ರೋತ್ಸಾಹಕ ಫಲಿತಾಂಶ ತಂದು ಕೊಟ್ಟಿವೆ. ಆದರೂ ಕುರಿಗಳಲ್ಲಿ ಕೃತಕ ಗರ್ಭಧಾರಣಾ ವಿಧಾನವನ್ನು ತೀವ್ರಗತಿಯಲ್ಲಿ ನಡೆಸಲು ಸಾಧ್ಯವಿಲ್ಲದ್ದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಕುರಿಗಳು ವಿಪುಲ ಸಂಖ್ಯೆಯಲ್ಲಿರುತ್ತವೆ. ಹಾಗೂ ಮಂದೆಗಳಲ್ಲಿ ಊರಿಂದ ಊರಿಗೆ ವಲಸೆ ಹೋಗುವ ಅಭ್ಯಾಸವಿರುತ್ತದೆ. ಈ ವೈಜ್ಞಾನಿಕ ವಿಧಾನವನ್ನು ಸ್ಥಳದಲ್ಲೇ ನೆಲೆಯಾಗಿರುವ ಸಣ್ಣ ಮಂದೆಗಳಲ್ಲಿ ಯಶಸ್ವಿಯಾಗಿ ಪ್ರಯೋಗಿಸಬಹುದು. ಈ ಒಂದು ವಿಧಾನದಿಂದ ಹೆಚ್ಚಿನ ಸಂಖ್ಯೆಯ ಮಿಶ್ರ ತಳಿ ಟಗರನ್ನು ಉತ್ಪಾದಿಸಬಹುದು. ಈ ಮಿಶ್ರ ತಳಿ ಸಂವರ್ಧನಾ ಕ್ರಿಯೆಯಿಂದ ಉತ್ತಮ ಗುಣವುಳ್ಳ ಹಾಗೂ ಹೆಚ್ಚಿನ ಪ್ರಮಾಣದ ಮಾಂಸ ಹಾಗೂ ಉಣ್ಣೆಯನ್ನು ಉತ್ಪತ್ತಿ ಮಾಡಬಹುದು. ಈ ಮಿಶ್ರ ತಳಿಯ ಉಣ್ಣೆಯನ್ನು ಸಂಸ್ಕರಿಸುವ ವಿಧಾನ ನಮ್ಮ ಬಳಕೆಯಲ್ಲಿರುವ ಪದ್ಧತಿಗಿಂತ ಹೊರತಾಗಿದೆ. ಕರ್ನಾಟಕ ರಾಜ್ಯವು ಮಿಶ್ರ ತಳಿ ಟಗರನ್ನು ೬ ಕುರಿ ಸಂವರ್ಧನಾ ಕೇಂದ್ರಗಳಲ್ಲಿ ಉತ್ಪಾದಿಸುತ್ತದೆ:

  • ಕುರಿ ಸಂವರ್ಧನಾ ಕೇಂದ್ರ ಚಳ್ಳಕೆರೆ

ಸುಮಾರು ೯೮೦೦ ಎಕರೆ ವಿಸ್ತಾರವನ್ನು ಹೊಂದಿರುವ ಈ ಕೇಂದ್ರದಲ್ಲಿ ಡೆಕ್ಕನಿ ತಳಿಯ ಕುರಿಗಳನ್ನು ವಿದೇಶಿ ತಳಿಯಾದ ರ್ಯಾಂಬುಲೆ ತಳಿಯೊಡನೆ ಸಂಕರಣಗೊಳಿಸಿ ಮಿಶ್ರ ತಳಿ ಟಗರುಗಳನ್ನು ಉತ್ಪಾದಿಸಿ ರೈತರಿಗೆ ವಿತರಿಸಲಾಗುವುದು.

  • ವಿದೇಶಿ ಕುರಿ ತಳಿ ಸಂವರ್ಧನಾ ಕೇಂದ್ರ ವಿಳ್ಳೆವರ್ತಿ

ಸುಮಾರು ೨೦೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ವಿದೇಶಿ ಶುದ್ಧ ತಳಿಯ ಕುರಿಗಳನ್ನು ಸಾಕಲಾಗುತ್ತಿದ್ದು, ಈ ಕೇಂದ್ರದಲ್ಲಿ ಉತ್ಪಾದನೆಯಾದ ಶುದ್ಧ ತಳಿ ರ್ಯಾಂಬುಲೆ ಟಗರುಗಳನ್ನು ಬೀಜಕ್ಕಾಗಿ ಇತರೆ ಕುರಿ ಸಂವರ್ಧನಾ ಕೇಂದ್ರಗಳಿಗೆ ಒದಗಿಸುವ ಗುರಿಯನ್ನು ಹೊಂದಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಸುತ್ತಟ್ಟಿ

ಸುಮಾರು ೧೮೭ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಡೆಕ್ಕನಿ ಕುರಿಗಳ ಹಾಗೂ ರ್ಯಾಂಬುಲೆ ಕುರಿಗಳ ಮಿಶ್ರ ತಳಿ ಸಂಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಅಲ್ಲದೆ ರೈತರಿಗೆ ಕುರಿ ಸಾಕಾಣಿಕೆಯಲ್ಲಿ ತರಬೇತಿ ಮತ್ತು ಉಣ್ಣೆ ಉತ್ಪಾದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

  • ಕುರಿ ಸಂವರ್ಧನಾ ಕೇಂದ್ರ ಗುತ್ತೇಲು

ಸುಮಾರು ೨೯೪ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಮಿಶ್ರ ತಳಿ ಸಂಕರಣ ಉತ್ಪಾದನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಧನಗೂರು

ಸುಮಾರು ೬೦೦ ಎಕರೆ ವಿಸ್ತಾರ ಹೊಂದಿರುವ ಈ ಕೇಂದ್ರದಲ್ಲಿ ಜಗತ್ಪ್ರಸಿದ್ಧವಾದ ಬನ್ನೂರು ಮಾಂಸದ ತಳಿಯನ್ನು ಶುದ್ಧ ತಳಿ ರೂಪದಲ್ಲಿ ಉಳಿಸಿಕೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  • ಕುರಿ ಸಂವರ್ಧನಾ ಕೇಂದ್ರ ಅನಗವಾಡಿ

ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ಸದರಿ ಕೇಂದ್ರವು ಮಂಡಳಿಗೆ ಈವರೆಗೆ ಹಸ್ತಾಂತರಗೂಂಡಿರುವುದಿಲ್ಲ. ಕುರಿ ಸಾಕಣೆ ಮತ್ತು ಉಣ್ಣೆ ಉತ್ಪಾದನೆ ಹಾಗೂ ಕುರಿಗಳ ಸಂವರ್ಧನೆಗಾಗಿ ಶಾಖೆಯು ಅನೇಕ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕುರಿಗಳ ಅಭಿವೃದ್ಧಿಗಾಗಿ ಆರು ಕುರಿ ಸಂವರ್ಧನಾ ಕ್ಷೇತ್ರ ಮತ್ತು ಹತ್ತು ಕುರಿ ಸಾಕಾಣಿಕೆದಾರರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯಾದ್ಯಂತ ಏಳು ಕುರಿ ಮತ್ತು ಉಣ್ಣೆ ಅಭಿವ್ರುದ್ಧಿ ಯೋಜನೆಗಳನ್ನು ಅನುಷ್ಠಾನಗುಳಿಸಲಾಗಿದೆ. ಕುರಿ ಸಾಕಣೆ ಸಾಕಾಣಿಕೆಯಲ್ಲಿ ತರಬೇತಿ ನೀಡುವುದರ ಮೂಲಕ ಕುರಿ ಸಂವರ್ಧನೆ ನಡೆದಿದೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೈತರಿಗೆ ವಿದೇಶಿ ರ್ಯಾಂಬುಲೆ ಟಗರುಗಳನ್ನು ವಿತರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಚಿತ್ರದುರ್ಗ ಜಿಲ್ಲೆಯ ಉಳ್ಳ ಕ್ಷೇತ್ರದಲ್ಲಿ ವಿದೇಶಿ ತಳಿ ಕುರಿಗಳ ಪೋಷಣೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿ ಬಂಡೂರು ತಳಿ ಕುರಿ ಅಭಿವೃದ್ಧಿ ನಡೆಸಲಾಗುತ್ತಿದ್ದು, ಜಮುನಾ ಪಾರಿ ಆಡು ತಳಿಗಳ ಮೂಲಕ ರಾಜ್ಯದ ದೇಶೀ ಮೇಕೆಗಳನ್ನು ಉತ್ತಮಗೊಳಿಸುಮಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರದ ಪ್ರೊತ್ಸಾಹ ಮತ್ತು ವಿಫಲತೆ ಹಾಗೂ ಅದನ್ನು ಸರಿಪಡಿಸಲು ಸಲಹೆಗಳುಸಂಪಾದಿಸಿ

ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ. ಏಕೆಂದರೆ ಇವುಗಳನ್ನು ಕಟ್ಟಿ ಮೇಯಿಸುವುದಾಗಲಿ ಹಟ್ಟಿಗಳಲ್ಲಿ ಕೂಡಿ ಮೇಯಿಸುವುದಾಗಲಿ ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಅಂದರೆ ಜೂನ್ ತಿಂಗಳಿಂದ ಸೆಪ್ಟೆಂಬರ‍್ವರೆಗೆ ಬೆಟ್ಟ ಗುಡ್ಡಗಳಲ್ಲಿ ಹಸಿರು ಹುಲ್ಲು ದೊರೆಯುವುದರಿಂದ ನಂತರ ಖುಷ್ಕಿ ಜಮೀನುಗಳಲ್ಲಿ ಪೈರುಗಳ ಉಳಿಕೆಗಳನ್ನು ಹಾಗೂ ಹೀಗೂ ಡಿಸೆಂಬರ್ ತಿಂಗಳವರೆಗೂ ಮೇಯಿಸಲು ಸಾಧ್ಯವಾಗಬಹುದು. ಕುರಿಗಾರನ ನಿಜವಾದ ಕಷ್ಟದ ದಿನಗಳು ಜನವರಿಯಿಂದ ಪ್ರಾರಂಭವಾಗಿ ಮೇ ತಿಂಗಳವರೆಗೆ ಮುಂದುವರೆದು ಕುರಿಗಳ ಹೊಟ್ಟೆ ತುಂಬಿಸುವುದಕ್ಕಾಗಿ ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇಂತಹ ದಿನಗಳಲ್ಲೇ ಕುರಿಗಾರರು ತಮ್ಮ ಹಿಂಡಿನೊಂದಿಗೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುತ್ತಾರೆ. ಮಾರ್ಗಗಳ ಬದಿಯ ಮೇವಿನ ಮರಗಳ ಟೊಂಗೆಗಳನ್ನು ಕಡಿದು ಹಾಕಿ ಅವುಗಳನ್ನು ಬರಡುಗೊಳೆಸುತ್ತಾರೆ. ಮಲೆನಾಡಿನ ಕಾಡುಗಳಿಗೆ ಲಗ್ಗೆ ಇಡುತ್ತಾರೆ ಇಂತಹ ಸಂದರ್ಭಗಳಲ್ಲೇ ಕುರಿಗಳು ಕುಡಿಯಲು ಸಾಕಷ್ಟು ಮತ್ತು ಯೋಗ್ಯವಾದ ನೀರಿನ ಕೊರತೆಯಿಂದಾಗಿ ಜಂತು ಹುಳುವಿನ ಬಾಧೆ ಮತ್ತು ರೋಗ ರುಜಿನಗಳಿಗೆ ತುತ್ತಾಗುತ್ತವೆ. ನೂರಾರು ವರ್ಷಗಳಿಂದ ಕುರಿಗಳು ಗೋಮಾಳಗಳಲ್ಲಿ, ಗುಡ್ಡ, ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮೇದು ಅವುಗಳಲ್ಲಿ ಉಪಯುಕ್ತವಾದ ಮೇವಿನ ಮರಗಳು, ಹಸಿರು ಹುಲ್ಲಿನ ತಳಿಗಳು ಉಳಿಯದೆ ಭೂಮಿಯು ಬರಡಾಗಿ ಬರೀ ಮುಳ್ಳು ಕಂಟಿಗಳಿಂದಲೂ ಜಾನುವಾರುಗಳಿಗೆ ಉಪಯುಕ್ತವಲ್ಲದ ಸಸ್ಯಗಳಿಂದಲೂ ತುಂಬಿರುವುದಲ್ಲದೆ ಮಣ್ಣಿನ ಕೊರತಕ್ಕೆ ಎಡೆಕೊಟ್ಟು ಭೂಮಿಯ ಸಾರವು ನಿಸ್ಸಾರವಾಗುತ್ತಿದೆ. ಇದರ ಜೊತೆಗೆ ಮಳೆಯು ಕಡಿಮೆ ಆಗುತ್ತಿದ್ದು, ಹಸಿರು ಹುಲ್ಲಿನ ಮತ್ತು ಗಿಡಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿ ಪಡೆಸುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಇತ್ತೀಚೆಗೆ ಸರ್ಕಾರ ಹಮ್ಮಿಕೊಂಡಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಕೆಲವು ಪ್ರದೇಶಗಳು ಅಭಿವೃದ್ಧಿಗೊಂಡಿದ್ದರೂ ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸವಾಗಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳು ಸಾಮಾಜಿಕ ಅರಣ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸ್ಥಳಗಳಲ್ಲಿ ಜಾನುವಾರು, ಕುರಿ, ಮೇಕೆಗಳನ್ನು ಮೇಯಿಸುಲು ಬಿಡುವುದಿಲ್ಲ. ಜಾನುವಾರುಗಳನ್ನು ಕಟ್ಟಿ ಮೇಯಿಸಬಹುದಾದರು ಕುರಿಗಳನ್ನು ಅರಣ್ಯಗಳ ಅಂಚು ಪ್ರದೇಶಗಳಲ್ಲಾದರೂ ಮೇಯಿಸಲು ಅವಕಾಶವಿರಬೇಕು. ತ್ವರಿತವಾಗಿ ಬೆಳೆಯುವ ಮೇವಿನ ಮರಗಳಾದ ಸುಬಾಬುಲ್, ಬ್ರಿಜ ಬಾಬುಲ್, ಬೋರೆ ಮರ, ಗೊಬ್ಬರದ ಗಿಡ, ಗಾಳಿ ಮರ, ಹಾಲವಾಣ, ಕ್ಯಾಲಿಯೊಂಡ್ರ, ಅಗಸೆ, ಸೇವರಿ, ಸರ್ವೆ, ಹೂವರಸೆ, ನುಗ್ಗೆ, ಹೆಬ್ಬೇವು, ಬಳ್ಳಾರಿ ಜಾಲಿ, ಬೆಂಗಾಲ ಜಾಲಿ ಹಾಗೂ ಲಂಟಾನಾ ಮತ್ತು ಹಿಪ್ಪುನೇರಳೆ ಇತ್ಯಾದಿ ಮರಗಳನ್ನು ಹೊಲಗಳ ಬದುಗಳು, ಕೆರೆಕುಂಟೆಗಳ ಅಕ್ಕಪಕ್ಕ ಪಾಳು ಭೂಮಿಯಲ್ಲಿ ಬೆಳೆಯಬೇಕು, ಈ ಮರಗಳಿಂದ ಎಲೆ ಚಿಗುರನ್ನು ತಂದು ಬಾಡಿಸಿ ಕುರಿಗಳಿಗೆ ಕೊಡಬಹುದು. ಸರ್ಕಾರದವರು ರೈತರ ಜಮೀನುಗಳಲ್ಲಿ ಒಡ್ಡುಗಳನ್ನು ನಿರ್ಮಿಸುತ್ತಿದ್ದು, ಈ ಒಡ್ಡುಗಳ ಮೇಲೆ ಹಾಗೂ ಬದಿಯಲ್ಲಿ ಹುಲ್ಲು ಹಾಗೂ ಮೇವಿನ ಮರಗಳನ್ನು ನೆಡುವುದರಿಂದ ಭೂಮಿಯ ಕೊರೆತ ತಪ್ಪುವುದಲ್ಲದೆ ಭೂಮಿಯ ಸಾರಜನಕದ ಅಂಶ ಸಹ ಹೆಚ್ಚುವುದು. ಆಹಾರ ಧಾನ್ಯಗಳ ಬೆಳೆಗಳನ್ನು ಕಟಾವು ಮಾಡಿದ ನಂತರ ಪರ್ಯಾಯ ಬೆಳೆಯಾಗಿ ಮೇವಿನ ಬೆಳೆಗಳನ್ನು ಬೆಳೆಯಬಹುದು. ಸರ್ಕಾರವು ಈಗಾಗಲೇ ಹಮ್ಮಿಕೊಂಡಿರುವಂತೆ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಧಾರಿಸಿದ ಹುಲ್ಲು ಹಾಗೂ ಮೇವಿನ ಮರಗಿಡಗಳನ್ನು ಬೆಳೆಸುವುದು; ಈ ಮರಗಿಡಗಳಿಂದ ಹಸಿರೆಲೆಗಳನ್ನು ತಂದು ಒಣಗಿಸಿ ಹದ ಮಾಡಿ ಕೂಡಿಟ್ಟು ಕೊಂಡು ಮೇವಾಗಿ ಕೊಡುವುದು; ಹುಲ್ಲುಗಾವಲು ಪುನಶ್ಚೇತನ ಹಾಗೂ ವಿಕಾಸಗೊಳಿಸುವ ಯೋಜನೆ, ವೀವು ತಳಿಗಳ ಬೀಜೋತ್ಪತ್ತಿ ಸಂಸ್ಕರಣೆ ಹಾಗೂ ಬೀಜಾಭಿವೃದ್ಧಿ ಯೋಜನೆ, ಮೇವು ನಿಧಿ, ಪೌಂಡರ್ ಮಿನಿಕಿಟ್ ವಿತರಣೆ ಯೋಜನೆ; ಮೇವು ಮರಗಳ ಸಸಿ ಬೆಳೆಸುವಿಕೆ ಸಂರಕ್ಷಣೆ ಹಾಗೂ ವಿತರಣೆ ಯೋಜನೆಗಳನ್ನು ಕ್ರಿಯಾತ್ಮಕಗೊಳಿಸುವುದು. ಪ್ರಚಲಿತ ವ್ಯವಸ್ಥೆಯಲ್ಲಿ ಹೆಚ್ಚುವರಿ ಕುರಿಗಳನ್ನು ರೈತರು ಸ್ಥಳಕ್ಕೆ ಬಂದು ಕೊಂಡುಕೊಳ್ಳುವ ಕಟುಕ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಕೊಂಡ ಕಟುಕರು ಗ್ರಾಮಸ್ಥರ ಮಾಂಸದ ಬೇಡಿಕೆಯನುಸಾರ ಅಲ್ಲಿಯೇ ಕಟಾವು ಮಾಡಬಹುದು. ಹತ್ತಿರದ ಪಟ್ಟಣಗಳಿಗೆ ಸಾಗಿಸಬಹುದು ಅಥವಾ ಅಲ್ಲಿಯೇ ವಧಾಗಾರಗಳಿಗೆ ಒದಗಿಸಬಹುದು ಅಥವಾ ಗುತ್ತಿಗೆದಾರರು ದಲ್ಲಾಳಿಗಳಿಗೆ ಮಾರಲೂಬಹುದು. ಗ್ರಾಹಕರ ಮಧ್ಯೆ ೩-೪ ದಲ್ಲಾಳಿಗಳಿರುತ್ತಾರೆ. ಕುರಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಹ ಕುರಿ ಮತ್ತು ಆಡುಗಳ ಸಂಘಟಿತ, ಸುವ್ಯವಸ್ಥಿತ ಮಾರುಕಟ್ಟೆ ಇಲ್ಲ. ಈ ಪದ್ಧತಿಯಲ್ಲಿ ಉತ್ಪತ್ತಿದಾರರಿಗೂ ಲಾಭವಿಲ್ಲ ಮತ್ತು ಉಪಯೋಗಿಸುವ ಗ್ರಾಹಕರಿಗೆ ಉತ್ತಮ ಮಾಂಸ ಸರಿಯಾದ ಬೆಲೆಗೆ ದೊರಕುತ್ತಿಲ್ಲ. ಹೆಚ್ಚು ಲಾಭಾಂಶ ಮಧ್ಯವರ್ತಿ ದಲ್ಲಾಳಿಗಳಿಗೆ ದಕ್ಕುತ್ತದೆ. ಕುರಿಗಳನ್ನು ವೈಜ್ಞಾನಿಕವಾಗಿ ಶರೀರ ತೂಕದ ಮಾಂಸದ ಇಳುವರಿ ಆಧಾರಿತವಲ್ಲದ ಬರೀ ಮೇಲ್ನೋಟದ ಶರೀರ ಪ್ರಮಾಣದ ಕಣ್ಣಳತೆಯ ಮೇಲೆ ಕೊಳ್ಳಲಾಗುತ್ತದೆ. ಮಧ್ಯವರ್ತಿಗಳ ಹಿಡಿತದಿಂದ ಕುರಿ ಮತ್ತು ಆಡುಗಳ ಉತ್ಪಾದಕನನ್ನು ಮುಕ್ತಗೊಳಿಸಿ ಅವರಿಗೆ ನ್ಯಾಯವಾದ ಬೆಲೆ ದಕ್ಕುವಂತೆ ಮಾಡಬೇಕಾದರೆ ಸುವ್ಯವಸ್ಥಿತ ಮಾರುಕಟ್ಟೆಯನ್ನು ಕುರಿ ಉತ್ಪಾದಕರ ಸಂಘಗಳ ಮೂಲಕ ಏರ್ಪಾಡು ಮಾಡಬೇಕಾದ ಅಗತ್ಯವಿದೆ.

ಗ್ರಾಮೀಣ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಹೇಗೆ ಸಹಕಾರಿಸಂಪಾದಿಸಿ

ಕುರಿ ಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ರಾಜ್ಯದಲ್ಲಿ ೨೦೦೬-೦೭ನೇ ಸಾಲಿನಲ್ಲಿ ಒಟ್ಟು ಅಂದಾಜು ೩೦.೮೩ ಟನ್ ಕುರಿ ಮಾಂಸದ ಉತ್ಪಾದನೆಯಾಗಿದ್ದು, ಇದರ ಮೌಲ್ಯ ರೂ. ೪೮.೦೪ ಲಕ್ಷಗಳಾಗಿರುತ್ತದೆ. ಕುರಿಗಳ ಮಾಂಸವು ಉತ್ತಮ ಗುಣಮಟ್ಟದಾಗಿದ್ದು, ದೇಶದ ಬಹು ದೊಡ್ಡ ಮಾಂಸಹಾರಿ ವರ್ಗದ ಆಹಾರದ ಮುಖ್ಯ ಅಂಶವಾಗಿದ್ದು, ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಇದೇ ಅವಧಿಯಲ್ಲಿ ಒಟ್ಟು ೫೫೮೫ ಟನ್ ಉಣ್ಣೆ ಉತ್ಪಾದಿಸಲಾಗಿದ್ದು, ಇದರ ಮೌಲ್ಯ ಪ್ರಸ್ತುತ ಮಾರುಕಟ್ಟೆ ದರದಲ್ಲಿ ೫.೫೮ ಕೋಟಿ ರೂಪಾಯಿಗಳಾಗಿರುತ್ತದೆ. ಈ ಉಣ್ಣೆಯನ್ನು ಕಂಬಳಿ, ರತ್ನಗಂಬಳಿ, ಉಣ್ಣೆ ಶಾಲು, ಡ್ರಗೇಟ್ ಟೋಪಿ ಮುಂತಾದ ಉಣ್ಣೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ. ಕುರಿಗಳನ್ನು ಚಲಿಸುವ ಬ್ಯಾಂಕುಗಳೆಂದು ಅಥವಾ ನಿಧಿಯೆಂದು ಕರೆಯಲಾಗುತ್ತದೆ. ಏಕೆಂದರೆ, ರೈತ ಬೇಕೆಂದಾಗ ಕುರಿಗಳನ್ನು ಮಾರಿ ತಕ್ಷಣ ಹಣ ಪಡೆಯಬಹುದು. ಆದರೆ ವ್ಯವಸಾಯದಿಂದಾಗಲಿ ಅಥವಾ ತೋಟಗಾರಿಕೆಯಿಂದಾಗಲಿ ಈ ರೇತಿ ದಿಢೀರನೆ ಹಣ ಗಳಿಸಲಾಗುವುದಿಲ್ಲ. ನಿರುದ್ಯೋಗ ನಿವಾರಣೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕೈಗೊಂಡ ಕಾರ್ಯಕ್ರಮಗಳಲ್ಲಿ ಕುರಿ ಘಟಕ ಸ್ಥಾಪನೆಯೂ ಸಹ ಒಂದು ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಬಂಡವಾಳವನ್ನು ಬಳಸಿಕೊಂಡು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ಲಾಭವನ್ನು ಪಡೆಯಲು ಸಹಾಯವಾಗುವುದು. ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನಾಂಗಗಳಲ್ಲೂ ಲಾಭದಾಯಕ ಕುರಿ ಸಾಕಾಣಿಕೆಯ ಮುಖಾಂತರ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ೨೦ ಕುರಿ ಮತ್ತು ಒಂದು ಟಗರಿನ ಘಟಕ ಹಮ್ಮಿಕೊಳ್ಳಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ ಸಾಲದ ವ್ಯವಸ್ಥೆಯನ್ನು ಸಹ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಮೂಲಕ ಮಾಡಲಾಗಿದೆ. ಕುರಿ ಸಾಕಾಣಿಕೆ ಉದ್ಯಮವನ್ನು ಸಹಕಾರ ತತ್ವದ ಮೇಲೆ ಮಾಡಲು ಸಾಧ್ಯವೇ? ರಾಜ್ಯ ಸರ್ಕಾರವು ಕುರಿ ಅಭಿವೃದ್ಧಿಗಾಗಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಆರು ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾದ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸ್ಥಾಪನೆ ಯೋಜನೆಗೆ ಮಂಜೂರಾತಿ ನೀಡಿದೆ ಹಾಗೂ ಪ್ರತಿ ಸಂಘಕ್ಕೆ ರೂ. ೧೦,೦೦೦/- ಷೇರು ಬಂಡವಾಳವಾಗಿ ಮಾರುಕಟ್ಟೆ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನೀಡಲು ಮಂಜೂರಾತಿ ನೀಡಿದೆ. ಅದರಂತೆ ಸದರಿ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳಲು ಆಯಾ ಜಿಲ್ಲೆಗಳ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರುಗಳನ್ನು ಕೋರಲಾಗಿದೆ. ಈ ಸಂಘಗಳ ಮುಖ್ಯ ಉದ್ದೇಶ ಕುರಿ ಉಣ್ಣೆಯ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವುದು, ಕುರಿಗಾರರಿಗೆ ತಾಂತ್ರಿಕತೆ ಹಾಗೂ ಆರ್ಥಿಕ ಸವಲತ್ತುಗಳನ್ನು ಒದಗಿಸುವುದು, ಯಾಂತ್ರೀಕೃತ ಉಣ್ಣೆ ಕಟಾವು ಸೌಲಭ್ಯಗಳನ್ನು ಕಲ್ಪಿಸುವುದು.


ಕೃಪೆ: ವಿಕಿಪೀಡಿಯಾ


ಕುರಿಯ ಕೊಟ್ಟಿಗೆ ನಿರ್ಮಾಣ ಮಾಡಲು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಆರ್ಥಿಕ ನೆರವನ್ನು ನೀಡಲಾಗುವುದು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಗ್ರಾಮಪಂಚಾಯಿತಿ ಸಂಪರ್ಕಿಸಿ

ಭಾನುವಾರ, ಅಕ್ಟೋಬರ್ 11, 2020

ಮಣ್ಣು ಬಿಟ್ಟವರಿಗೆ ಆಧಾರವಿಲ್ಲ ಪುರಂದರ ದಾಸರು

ಮಣ್ಣಿಂದ ಕಾಯ ಮಣ್ಣಿಂದ ||ಪ||
ಮಣ್ಣಿಂದ ಸಕಲ ದರುಶನಗಳೆಲ್ಲ
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣು ಬಿಟ್ಟವರಿಗೆ ಆಧಾರವಿಲ್ಲ
ಅಣ್ಣಗಳಿರೆಲ್ಲರು ಕೇಳಿರಯ್ಯ ||ಅ||

ಅನ್ನ ಉದಕ ಊಟವೀಯೋದು ಮಣ್ಣು
ಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣು
ಉನ್ನತವಾದ ಪರ್ವತವೆಲ್ಲ ಮಣ್ಣು
ಕಣ್ಣು ಮೂರುಳ್ಳವನ ಕೈಲಾಸ ಮಣ್ಣು ||

ದೇವರ ಗುಡಿ ಮಠ ಮನೆಯೆಲ್ಲ ಮಣ್ಣು
ಆವಾಗ ಅಡುವ ಮಡಕೆಯು ತಾ ಮಣ್ಣು
ಕೋವಿದರಸರ ಕೋಟೆಗಳೆಲ್ಲ ಮಣ್ಣು
ಪಾವನ ಗಂಗೆಯ ತಡಿಯೆಲ್ಲ ಮಣ್ಣು ||

ಭಕ್ತ ಭರಣ ಧಾನ್ಯ ಬೆಳವುದೆ ಮಣ್ಣು
ಸತ್ತರವನು ಹುಳಿ ಸುಡುವುದೆ ಮಣ್ಣು
ಉತ್ತಮವಾದ ವೈಕುಂಠವೆ ಮಣ್ಣು
ಪುರಂದರವಿಠಲನ್ನ ಪುರವೆಲ್ಲ ಮಣ್ಣು ||


ಏನಿದು ಮಣ್ಣು: ‘ಮಣ್ಣು ಘನ, ದ್ರವ ಹಾಗೂ ಅನಿಲರೂಪದ ವಸ್ತುಗಳಿಂದ ಕೂಡಿದ ಸಂಕೀರ್ಣ ವ್ಯವಸ್ಥೆ. ಈ ಘನವಸ್ತುಗಳು ವ್ಯತ್ಯಾಸ ಹೊಂದುವ ಖನಿಜ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಖನಿಜ ವಸ್ತುಗಳು ಕಣ್ಣಿಗೆ ಕಾಣುವ ಹಾಗೂ ಕಾಣದಷ್ಟು ಸೂಕ್ಷ್ಮವಾಗಿಯೂ ಇರುತ್ತವೆ. ಲಕ್ಷಾಂತರ ನಿರ್ಜೀವಿ ಹಾಗೂ ಸಜೀವಿ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ. ಗಾಳಿ ಮತ್ತು ನೀರು ಮಣ್ಣಿನಲ್ಲಿರುವ ನಿರ್ವಾತವನ್ನು ಆಕ್ರಮಿಸುತ್ತವೆ’ ಎನ್ನುತ್ತಾರೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಅಶೋಕ ಪಾತೇನವರ.

ಮಣ್ಣಿಂದಲೇ ಜೀವ: ‘ನೀರು ಮತ್ತು ಗಾಳಿಯನ್ನು ಸಂಗ್ರಹಿಸಿಕೊಳ್ಳುವ ಮಣ್ಣಿನ ಸಾಮರ್ಥ್ಯವೇ ‘ಜೀವ’ ಸೃಷ್ಟಿಗೆ ಕಾರಣವಾಗಿದೆ. ಇದು ಸಸ್ಯದ ಬೆಳವಣಿಗೆಯಲ್ಲಿ ಕಾಣಬಹುದು. ‘ಫಲವತ್ತ’ ಮಣ್ಣು ಎಂದರೆ  ಪೋಷಕಾಂಶ, ನೀರು ಹಾಗೂ ಗಾಳಿ ಸಂಬಂಧಗಳನ್ನು ಒಳಗೊಂಡಿರುವುದು. ಮಣ್ಣಿನ ಭೌತಿಕ ಸ್ಥಿತಿಗಳು ಅನುಕೂಲಕರವಗಿರುವುದು. ಇದರಿಂದಾಗಿ ಸಸ್ಯಗಳ ಬೆಳವಣಿಗೆ ಸಾಧ್ಯ’ ಎನ್ನುತ್ತಾರೆ ಅವರು.

ಮಣ್ಣಿನ ಸಾರ: ‘ಈಚಿನ ತನಕ ಅಧಿಕ ಇಳುವರಿಗಾಗಿ ಮಣ್ಣಿಗೆ ಹೆಚ್ಚಿನ ಪೋಷಕಾಂಶ ಒದಗಿಸುವ ಕಡೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿತ್ತು. ಹೀಗಾಗಿ ಮಣ್ಣಿನ ‘ರಸಾಯನಶಾಸ್ತ್ರ’ಕ್ಕೆ ಪ್ರಾಮುಖ್ಯತೆ ಸಿಕ್ಕಿತ್ತು. ಕಳೆದ ಐದಾರು ದಶಕಗಳಲ್ಲಿ ಫಲವತ್ತತೆಗೆ ಸಂಬಂಧಿಸಿದಂತೆ ಮಣ್ಣಿನ ಭೌತಗುಣಧರ್ಮಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ.

ಗರಿಷ್ಠ ಇಳುವರಿಗಾಗಿ ಮಣ್ಣಿನಲ್ಲಿರುವ ಪೋಷಕಾಂಶಗಳ ಮಟ್ಟವಷ್ಟನ್ನೇ ತಿಳಿಯುವುದು ಸಾಕಾಗಲಾರದು.  ವಾಯುಗುಣ, ಬೆಳೆಗಳು ಹಾಗೂ ವ್ಯವಸಾಯ ಕ್ರಮಗಳ ವ್ಯತ್ಯಾಸ ಹೊಂದುವ ಸ್ಥಿತಿಗಳ ಸಂಕೀರ್ಣ ವ್ಯವಸ್ಥೆಯ ಭೌತಿಕ ಹಾಗೂ ಯಾಂತ್ರಿಕ ವರ್ತನೆಯನ್ನು ತಿಳಿಯುವುದು ಅವಶ್ಯಕವಾಗಿದೆ’ ಎನ್ನುತ್ತಾರೆ ಅವರು.

‘ಮಣ್ಣಿನ ಭೌತಿಕ ಸ್ಥಿತಿಗಳೆಂದರೆ ರಚನೆ ಮತ್ತು ಉಳುಮೆ, ಗಾಳಿಯಾಡುವಿಕೆ, ನೀರನ್ನು ಹಿಡಿಯುವ ಸಾಮರ್ಥ್ಯ, ಇತ್ಯಾದಿ ಒಳಗೊಂಡಿದೆ. ಸಾವಯವ ವಸ್ತು ಸಸ್ಯ ಪೋಷಕಗಳ ಭಂಡಾರ. ಅದರಲ್ಲಿಯೂ ಮುಖ್ಯವಾಗಿ ಮಣ್ಣುಗಳಲ್ಲಿರುವ ಸಾರಜನಕದ ಭಂಡಾರ’ ಎನ್ನುತ್ತಾರೆ 



ಆಸೀಲ್ ಕೋಳಿ

ಅಸಿಲ್ 
 ಆಸೀಲ್ ಭಾರತೀಯ ಉಪಖಂಡದಿಂದ ಹುಟ್ಟಿದ ಕೋಳಿಯ ತಳಿಯಾಗಿದೆ.

 ಇದು ಭಾರತದ ಆಂಧ್ರಪ್ರದೇಶ ಮತ್ತು ತಮಿಳುನಾಡು ಮತ್ತು  ಪಂಜಾಬ್ ಪ್ರದೇಶದಲ್ಲಿ ಪ್ರಸಿದ್ಧವಾಗಿದೆ.  ಸಾಮಾನ್ಯವಾಗಿ ಈ ಕೋಳಿ ಆಗ್ನೇಯ ಏಷ್ಯಾದಾದ್ಯಂತ ಕಂಡುಬರುತ್ತದೆ, ಉದಾಹರಣೆಗೆ ಶಾಮೋ ಮತ್ತು ಥಾಯ್ ಗೇಮ್.  ಈ ತಳಿಯನ್ನು ಸಾಮಾನ್ಯವಾಗಿ ದಕ್ಷಿಣ ಏಷ್ಯಾ ಮತ್ತು ಭಾರತದಲ್ಲಿ ಪ್ರಮಾಣೀಕರಿಸಲಾಗುವುದಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನಪ್ರಿಯತೆ ಹೆಚ್ಚಾಗಿದೆ, 

 ವಿವರಣೆ ಮತ್ತು ಇತಿಹಾಸ
 ಅಸಿಲ್ಸ್ ಅನ್ನು ಮೊದಲು ಕೋಳಿ ಹೋರಾಟಕ್ಕಾಗಿ ಬಳಸಲಾಗುತ್ತಿತ್ತು ಮತ್ತು ಇದನ್ನು ಕೋಳಿ ಫೈಟಿಂಗ್ ಎಂದು ಪರಿಗಣಿಸಬಹುದು.  ಅಸಿಲ್ ಅದರ ಕಳ್ಳತನಕ್ಕೆ ಹೆಸರುವಾಸಿಯಾಗಿದೆ.  ಮರಿಗಳು ಕೆಲವೇ ವಾರಗಳಿದ್ದಾಗ ಆಗಾಗ್ಗೆ ಹೋರಾಡುತ್ತವೆ ಮತ್ತು ಪ್ರಬುದ್ಧ ರೂಸ್ಟರ್‌ಗಳು ಸಾವಿಗೆ ಹೋರಾಡುತ್ತವೆ.  ಕೋಳಿಗಳು ಸಹ ಪರಸ್ಪರರ ಕಡೆಗೆ ತುಂಬಾ ಆಕ್ರಮಣಕಾರಿ.

 ಮಾನವರ ಕಡೆಗೆ ಅಸಿಲ್ ಸಾಮಾನ್ಯವಾಗಿ ಬಹಳ ಪಳಗಿದ ಮತ್ತು ನಂಬುವವನು.  ಆಹಾರದ ಹೊರತಾಗಿ ಇತರ ವಿಷಯಗಳಿಗಾಗಿ ಅವರು ತಮ್ಮ ಕೀಪರ್‌ಗಳಿಗೆ ಬಂದಿರುವ ಉಪಾಖ್ಯಾನಗಳಿವೆ, ಉದಾಹರಣೆಗೆ, ಕೋಪ್‌ಗೆ ಕೋಪ್‌ನ ಬಾಗಿಲು ತೆರೆಯಲು ಅವರು ರೂ ಗೆ ಹೋಗಬಹುದು…

ಪ್ರಭೇದಗಳು 

 ಕುಲಾಂಗ್ ಅಸಿಲ್ ರೂಸ್ಟರ್ ಹೆಡ್ ಅವರ ಭಾವಚಿತ್ರ
 ಅಸಿಲ್ನ ಹಲವು ಪ್ರಭೇದಗಳಿವೆ, ಕೆಲವು ಯುಕೆ ನಲ್ಲಿ ರೆಜಾ ಅಸಿಲ್ ನಂತಹ ಪ್ರದರ್ಶನಗಳಿಗೆ ಪ್ರಮಾಣೀಕರಿಸಲ್ಪಟ್ಟಿವೆ, ಕೆಲವು ಸರಳವಾಗಿ ಅವುಗಳನ್ನು ಬೆಳೆಸುವ ಪ್ರದೇಶದ ಹೆಸರಿನಿಂದ ಹೆಸರಿಸಲಾಗಿದೆ, 

 ಕೋಳಿ-ಗರಿಗಳಿರುವ ಅಸಿಲ್ ಸಹ "ಮದರೂ" ಎಂದು ತಿಳಿದಿದ್ದಾರೆ, ಇವುಗಳು ವಿವಿಧ ಬಣ್ಣಗಳಲ್ಲಿ ಕಂಡುಬರುತ್ತವೆ, ಆದರೆ ಕಾಕ್ಸ್ ಕೋಳಿ ಬಣ್ಣದಲ್ಲಿ ಗರಿಗಳೊಂದಿಗೆ ಬರುತ್ತವೆ, ಬಾಲಗಳಲ್ಲಿ ಕುಡಗೋಲು ಗರಿಗಳನ್ನು ಹೊಂದಿಲ್ಲ ಮತ್ತು ತಡಿ ಮೇಲೆ ದೊಡ್ಡ ನೇತಾಡುವ ಗರಿಗಳನ್ನು ಕಳೆದುಕೊಳ್ಳುತ್ತವೆ.  ಈ ವಿಧವು ಬಹಳ ಅಪರೂಪ.

 "ಮಫ್ಡ್" ಎಂದು ಕರೆಯಲ್ಪಡುವ ಕೊಕ್ಕಿನ ಕೆಳಗೆ ಗರಿ ಗಡ್ಡವನ್ನು ಹೊಂದಿರುವ ಅಸಿಲ್ ಮತ್ತು ಅವರ ತಲೆಯ ಮೇಲ್ಭಾಗದಲ್ಲಿ "ಟಸ್ಸೆಲ್ಡ್" ಎಂದು ಕರೆಯಲ್ಪಡುವ ಟಫ್ಟ್‌ಗಳನ್ನು ಸಹ ಕಾಣಬಹುದು, ಆದರೆ ವಿಶೇಷವಾಗಿ ಭಾರತ / ಪಾಕಿಸ್ತಾನದ ಹೊರಗೆ ಬಹಳ ವಿರಳ.

 ಭೈಂಗಮ್ ಅಸಿಲ್
ಪ್ರಭೇದವು ದೊಡ್ಡ ಏಕ ಬಾಚಣಿಗೆಯನ್ನು ಹೊಂದಿದೆ ಆದರೆ ಇತರ ಎಲ್ಲ ಅಸಿಲ್ ಮಾನದಂಡಗಳಿಗೆ ಖಚಿತಪಡಿಸುತ್ತದೆ.

 ವಿಶಾಲವಾಗಿ ಹೇಳುವುದಾದರೆ, ಯುರೋಪಿನ ಅಸಿಲ್ ಅನ್ನು ಈ ಮೂರು ಪ್ರಕಾರಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ ಮತ್ತು ತೋರಿಸಲಾಗಿದೆ:
ಮದ್ರಾಸ್ ಅಸಿಲ್ ಸಂಪಾದಿಸಿ
 (ತಮಿಳು ಸ್ಥಳೀಯ ಹೆಸರು: ಕಥಿಕಲ್ ಪೆರುವೇದೈ) ಇದು ಹಿಂದಿನ ಮದ್ರಾಸ್ ಪ್ರಾಂತ್ಯದಲ್ಲಿ ಕಂಡುಬರುವ ಭಾರೀ ರೀತಿಯ ಆಸೀಲ್ ಆಗಿದೆ.  ದೇಹದ ಪ್ರಕಾರ ಮತ್ತು ಬಣ್ಣ ವರ್ಗೀಕರಣವು ಉದ್ದನೆಯ ಬಾಲ ಗಿಳಿ ಕೊಕ್ಕಿನ ಅಸಿಲ್ನಂತೆಯೇ ಇರುತ್ತದೆ.  ಲಾಂಗ್‌ಟೇಲ್ ಗಿಳಿ ಕೊಕ್ಕಿನ ಆಸೀಲ್‌ಗಿಂತ ಭಿನ್ನವಾಗಿ ಅವು ಸಾಮಾನ್ಯ ಬಾಲ ಮತ್ತು ಮೂಗನ್ನು ಹೊಂದಿವೆ.  ಅವುಗಳನ್ನು ಚಾಕು ಹೋರಾಟಕ್ಕೆ ಬಳಸಲಾಗುತ್ತದೆ.  ಅವು ಪ್ರಧಾನವಾಗಿ ತಮಿಳುನಾಡಿನಲ್ಲಿ ಕಂಡುಬರುತ್ತವೆ.
ಕಿಲಿಮೂಕ್ಕು ಆಸೀಲ್ (ಗಿಳಿ ಕೊಕ್ಕು / ಮೂಗಿನ ಉದ್ದನೆಯ ಬಾಲ) 

 ಅಸಿಲ್ ಚಿಕನ್

 ಅಸಿಲ್ ಚಿಕನ್
 (ತಮಿಳು ಸ್ಥಳೀಯ ಹೆಸರು: ಕಿಲಿಮೂಕು ವಿಸಿರಿವಲ್ ಪೆರುವೇದೈ)

 ಲಾಂಗ್ ಟೈಲ್ ಗಿಳಿ ಬೀಕ್ ಆಸೀಲ್ ಒಂದು 
ಆಸೀಲ್ ತಳಿ ಭಾರತದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಮಾತ್ರ ಲಭ್ಯವಿದೆ.  ಹಿಂದೆ ಅವುಗಳನ್ನು ಹೋರಾಟದ ಪಕ್ಷಿಗಳಾಗಿ ಬಳಸಲಾಗಿದ್ದರೂ, ಇಂದು ಅವುಗಳ ಅಲಂಕಾರಿಕ ಮೌಲ್ಯಕ್ಕೆ ಬಹುಮಾನ ನೀಡಲಾಗಿದೆ. ಈ ಆಸೀಲ್‌ಗಳು ಬಾಡಿ ಬಿಲ್ಡರ್‌ಗಳಂತೆ ಬೃಹತ್ ಮತ್ತು ಸ್ನಾಯುಗಳಾಗಿರುತ್ತವೆ, ಉದ್ದನೆಯ ಬಾಲಗಳನ್ನು ಹೊಂದಿರುವ ಕೊಕ್ಕಿನೊಂದಿಗೆ ಬಹಳ ಚಿಕ್ಕದಾಗಿದೆ ಮತ್ತು ಗಿಳಿಯಂತೆಯೇ ದಪ್ಪವಾಗಿರುತ್ತದೆ  ಹೆಸರು ಕಿಲಿಮೂಕ್ಕು ಎಂದರೆ ಗಿಳಿ ಕೊಕ್ಕು.  ನಡಿಗೆಯಲ್ಲಿ ಮತ್ತು ಹೆಮ್ಮೆಯ ಮನೋಭಾವದಂತಹ ಅವರ ಯೋಧರನ್ನು ವಿಶೇಷವಾಗಿ ಗಮನಿಸಲಾಗಿದೆ.  ಇಂಗ್ಲಿಷ್ನಲ್ಲಿ ಅವುಗಳನ್ನು ಲಾಂಗ್ ಟೈಲ್ ಗಿಳಿ ಕೊಕ್ಕು / ನೋಸ್ ಆಸೀಲ್ಸ್ ಎಂದು ಕರೆಯಲಾಗುತ್ತದೆ.  ಈ ಪಕ್ಷಿಗಳು ಯಾವುದೇ ಆಸೀಲ್ ಉತ್ಸಾಹಿಗಳಿಂದ ಅಪೇಕ್ಷಿಸಲ್ಪಟ್ಟವು ಮತ್ತು ಬಯಸುತ್ತವೆ.

 ಪಕ್ಷಿಗಳನ್ನು ಸಾಮಾನ್ಯವಾಗಿ ಅವುಗಳ ಮೈಕಟ್ಟು ಮತ್ತು ಬಣ್ಣ ಸಂಯೋಜನೆಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ:

ಮಾಯಿಲ್ ಕರುಪ್ಪು (ಕಪ್ಪು ಮತ್ತು ಹಳದಿ)
 ಕಗಮ್ / ಸೆಂಗರುಪ್ಪು (ಕಪ್ಪು ಮತ್ತು ಕೆಂಪು)
 ಸೇವಲೈ (ಕೆಂಪು)
 ಕರೂಮ್ ಕೀರಿ / ಸೆಂಕೇರಿ (ಕಪ್ಪು / ಕೆಂಪು ಚುಕ್ಕೆ)
 ಸಂಬಲ್ ಬೂತಿ (ಬೂದು)
 ಕೊಕ್ಕು ವೆಲ್ಲೈ (ಬಿಳಿ)
 ನೂಲನ್ (ಬಿಳಿ ಮತ್ತು ಕಪ್ಪು)
 ಪೊಂಡ್ರಾಮ್ (ಗೋಲ್ಡನ್ ಬ್ರೌನ್)
 ಸರಾಸರಿ ಒಂದು ವರ್ಷದ ಕಿಲಿಮೂಕ್ಕು ಅಸಿಲ್ ಸುಮಾರು 5 ಕೆಜಿ ತೂಕವಿರುತ್ತದೆ ಮತ್ತು ಪೂರ್ಣವಾಗಿ ಬೆಳೆದಾಗ 7 ಕೆಜಿ ವರೆಗೆ ತೂಗುತ್ತದೆ.  ಈ ಆಸೀಲ್‌ಗಳನ್ನು ಆರಂಭಿಕ ದಿನಗಳಲ್ಲಿ ಚೀನಾ ಮತ್ತು ಥೈಲ್ಯಾಂಡ್‌ಗೆ ರಫ್ತು ಮಾಡಲಾಗುತ್ತಿತ್ತು ಆದರೆ ಈಗ ರಫ್ತು ನಿಷೇಧಿಸಲಾಗಿದೆ.  ಆದಾಗ್ಯೂ ಈ ಭವ್ಯ ಪಕ್ಷಿಗಳ ಮೊಟ್ಟೆಗಳಿಗಾಗಿ ಪ್ರಪಂಚದಾದ್ಯಂತ ಜನರು ಬರುತ್ತಾರೆ.  ಈ ಆಸೀಲ್‌ಗಳ ಸರಾಸರಿ ಜೀವಿತಾವಧಿ 5 ರಿಂದ 8 ವರ್ಷಗಳು, ಆದರೂ 10 ವರ್ಷ ವಯಸ್ಸಿನ ಪಕ್ಷಿಗಳು ಸಾಮಾನ್ಯವಲ್ಲ.
ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತಳಿಗಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಪಕ್ಷಿಗಳು ಪ್ರೀಮಿಯಂಗೆ ಆದೇಶ ನೀಡುತ್ತವೆ.  ಬಣ್ಣ, ಉದ್ದ, ಹರಡುವಿಕೆ ಮತ್ತು ಬಾಲದ ಸ್ಥಿರತೆ, ಕೊಕ್ಕಿನ ದಪ್ಪ ಮತ್ತು ವಕ್ರರೇಖೆ, ತಲೆಯ ಆಕಾರ ಮತ್ತು ಒಟ್ಟಾರೆ ಮೈಕಟ್ಟು ಮತ್ತು ಹಕ್ಕಿಯ ಗಾತ್ರವನ್ನು ಅವಲಂಬಿಸಿ ಬೆಲೆಗಳು 7000 ರಿಂದ 150000 ರೂ.

 ಸಂತಾನೋತ್ಪತ್ತಿ ಆಯ್ದವಾಗಿ ನಡೆಯುತ್ತದೆ ಮತ್ತು ತಳಿಗಾರರು ತಮ್ಮ ತಳಿಗಳಲ್ಲಿ ದಕ್ಷಿಣ ತಮಿಳುನಾಡಿನ ಹಳ್ಳಿಗಳಲ್ಲಿ ಶತಮಾನಗಳಿಂದ ಹೆಮ್ಮೆಪಡುತ್ತಾರೆ.  ಮಧುರೈ, ಅಲಂಗನಲ್ಲೂರ್, ದಿಂಡಿಗಲ್, ತಿರುಚ್ಚಿ, ಪಳನಿ, ಉದುಮಲೈ, ಪೊಲ್ಲಾಚಿ, ಸೇಲಂ, ನಾಮಕ್ಕಲ್ ಈ ನಿರ್ದಿಷ್ಟ ತಳಿಯನ್ನು ಗುರುತಿಸುವ ಪ್ರಮುಖ ಭೌಗೋಳಿಕ ಪಟ್ಟಿಗಳಾಗಿವೆ.  ತಳಿಗಾರ ಕೊಕ್ಕಿನ ಆಸೀಲ್ನ ತಳಿ ರೇಖೆಗಳನ್ನು ತಳಿಗಾರರು ಶತಮಾನಗಳಿಂದ ಸ್ಥಾಪಿಸಿದ್ದಾರೆ, ಇದು ಹಲವಾರು ತಲೆಮಾರುಗಳಲ್ಲಿ ಗೋಚರಿಸುವಲ್ಲಿ ಕೆಲವು ಗುಣಲಕ್ಷಣಗಳನ್ನು ಪುನರಾವರ್ತಿಸುತ್ತದೆ.

 ಈ ಆಸೀಲ್ ತಳಿಗಾರರ ಮುಖ್ಯ ನೋಂದಾಯಿತ ಕ್ಲಬ್‌ಗಳು:
ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ತಳಿಗಾರರ ಸಂಖ್ಯೆ ಹೆಚ್ಚಾಗಿದೆ ಮತ್ತು ಪಕ್ಷಿಗಳು ಪ್ರೀಮಿಯಂಗೆ ಆದೇಶ ನೀಡುತ್ತವೆ.  ಬಣ್ಣ, ಉದ್ದ, ಹರಡುವಿಕೆ ಮತ್ತು ಬಾಲದ ಸ್ಥಿರತೆ, ಕೊಕ್ಕಿನ ದಪ್ಪ ಮತ್ತು ವಕ್ರರೇಖೆ, ತಲೆಯ ಆಕಾರ ಮತ್ತು ಒಟ್ಟಾರೆ ಮೈಕಟ್ಟು ಮತ್ತು ಹಕ್ಕಿಯ ಗಾತ್ರವನ್ನು ಅವಲಂಬಿಸಿ ಬೆಲೆಗಳು 7000 ರಿಂದ 150000 ರೂ.

 ಸಂತಾನೋತ್ಪತ್ತಿ ಆಯ್ದವಾಗಿ ನಡೆಯುತ್ತದೆ ಮತ್ತು ತಳಿಗಾರರು ತಮ್ಮ ತಳಿಗಳಲ್ಲಿ ದಕ್ಷಿಣ ತಮಿಳುನಾಡಿನ ಹಳ್ಳಿಗಳಲ್ಲಿ ಶತಮಾನಗಳಿಂದ ಹೆಮ್ಮೆಪಡುತ್ತಾರೆ.  ಮಧುರೈ, ಅಲಂಗನಲ್ಲೂರ್, ದಿಂಡಿಗಲ್, ತಿರುಚ್ಚಿ, ಪಳನಿ, ಉದುಮಲೈ, ಪೊಲ್ಲಾಚಿ, ಸೇಲಂ, ನಾಮಕ್ಕಲ್ ಈ ನಿರ್ದಿಷ್ಟ ತಳಿಯನ್ನು ಗುರುತಿಸುವ ಪ್ರಮುಖ ಭೌಗೋಳಿಕ ಪಟ್ಟಿಗಳಾಗಿವೆ.  ತಳಿಗಾರ ಕೊಕ್ಕಿನ ಆಸೀಲ್ನ ತಳಿ ರೇಖೆಗಳನ್ನು ತಳಿಗಾರರು ಶತಮಾನಗಳಿಂದ ಸ್ಥಾಪಿಸಿದ್ದಾರೆ, ಇದು ಹಲವಾರು ತಲೆಮಾರುಗಳಲ್ಲಿ ಗೋಚರಿಸುವಲ್ಲಿ ಕೆಲವು ಗುಣಲಕ್ಷಣಗಳನ್ನು ಪುನರಾವರ್ತಿಸುತ್ತದೆ.

 ಈ ಆಸೀಲ್ ತಳಿಗಾರರ ಮುಖ್ಯ ನೋಂದಾಯಿತ ಕ್ಲಬ್‌ಗಳು:

ರೆಜಾ ಅಸೀಲ್ 

 ಎ ರೆಜಾ ಆಸಿಲ್ ರೂಸ್ಟರ್ ಮತ್ತು ಎರಡು ಕೋಳಿಗಳು
 ಎತ್ತರ: ಭುಜದ ಗುಂಡಿಯವರೆಗೆ ನಿಖರವಾಗಿ 14.5 ಇಂಚುಗಳಷ್ಟು ಎತ್ತರ.  ತೂಕ: ಕೋಳಿಗಳಿಗೆ ಗರಿಷ್ಠ ತೂಕ 1.8 ಕೆಜಿ, ಕಾಕ್ಸ್‌ನ ಗರಿಷ್ಠ ತೂಕ 2.7 ರಿಂದ 3 ಕೆಜಿ.

 ಈ ಪ್ರಕಾರವನ್ನು ಯುಕೆಯಲ್ಲಿರುವ ಏಷ್ಯನ್ ಹಾರ್ಡ್‌ಫೆದರ್ ಸೊಸೈಟಿ ಪ್ರಮಾಣೀಕರಿಸಿದೆ ಮತ್ತು ಇದು ಯುಕೆನಾದ್ಯಂತ ಪ್ರದರ್ಶನಗಳಲ್ಲಿ ಕಂಡುಬರುತ್ತದೆ, ಆದರೆ ಇದು ಬಹಳ ಅಪರೂಪ.

 ಗೇಮ್‌ಫೌಲ್ ತಜ್ಞರಾದ ಹರ್ಬರ್ಟ್ ಅಟ್ಕಿನ್ಸನ್, ಸಿರಾನ್ ಮತ್ತು ಶ್ರೀಲಂಕಾದ ಪಾಲ್ ಡೆರನಿಯಾಗಲಾ ಮತ್ತು ಚಿಲಿಯ ಕಾರ್ಲೋಸ್ ಫಿನ್‌ಸ್ಟರ್‌ಬುಷ್ ಅವರು ಬರೆದ ಪುಸ್ತಕಗಳು ಮತ್ತು ಲೇಖನಗಳಿಂದಾಗಿ ಈ ಅಸಿಲ್ ಗುಂಪು ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿತು.  ಹಳೆಯ (ಪಾಶ್ಚಾತ್ಯ) ಗೇಮ್‌ಫೌಲ್ ಸಾಹಿತ್ಯದ ಪ್ರಕಾರ ರೆ za ಾ ಅಸಿಲ್ ಕುಟುಂಬವನ್ನು ಈ ಕೆಳಗಿನ ತಳಿಗಳಾಗಿ ವಿಂಗಡಿಸಲಾಗಿದೆ: (ಅಮೀರ್) ಘಾನ್ (ಗಾ dark- ಕೆಂಪು), ಸೋನಾಟೋಲ್ (ತಿಳಿ-ಕೆಂಪು), (ಸಿಯಾ) ರಾಂಪುರ್ (ಕಪ್ಪು), ಕಲ್ಕತ್ತಿಯಾ (ಕಪ್ತಾನ್) (ಸ್ಪೆಕಲ್ಡ್  -ರೆಡ್ಸ್) ಮತ್ತು ಜಾವಾ (ಡಕ್ವಿಂಗ್).  ಈ ಎಲ್ಲಾ ತಳಿಗಳನ್ನು ಅವುಗಳ ನಿರ್ದಿಷ್ಟ ಬಣ್ಣದಿಂದ ಗುರುತಿಸಲಾಗುತ್ತದೆ, ಈ ಬಣ್ಣಗಳು ಪಕ್ಷಿಗಳು ಬರುವ ಪ್ರದೇಶಕ್ಕೆ ಹೊಂದಿಕೆಯಾಗುವುದಿಲ್ಲ.
ವಸಾಹತುಶಾಹಿ ಕಾಲದಲ್ಲಿ ಬಿಳಿಯರು, ಸ್ಪ್ಯಾಂಗಲ್ಸ್, ಗೋಲ್ಡನ್ ಮುಂತಾದ ಇತರ ಬಣ್ಣಗಳನ್ನು ಕೀಳಾಗಿ ಪರಿಗಣಿಸಲಾಯಿತು.  ಪ್ರಸ್ತುತ ದಿನಗಳಲ್ಲಿ ಅಟ್ಕಿನ್ಸನ್ ಉಲ್ಲೇಖಿಸಿರುವ "ಕ್ಲಾಸಿಕ್" ತಳಿಗಳು ಮತ್ತು ಹೆಸರುಗಳು ಹೆಚ್ಚು ಕಡಿಮೆ ಮರೆತುಹೋಗಿವೆ.  ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಸ್ಥಳೀಯ ಜನರು ತಮ್ಮ ಸ್ಥಳೀಯ ಹೆಸರಿನಿಂದ ಮಾತ್ರ ರೆ za ಾ ಮಾದರಿಯ ಅಸಿಲ್ ಅನ್ನು ತಿಳಿದಿದ್ದಾರೆ.

ಕುಲಾಂಗ್ ಅಸಿಲ್ 
 ಎತ್ತರ: 75 ಸೆಂ.ಮೀ.  ತೂಕ: 5 ರಿಂದ 7 ಕೆಜಿ.

 ದೊಡ್ಡ ಅಸಿಲ್ ಅನ್ನು ಉಪ ಪ್ರಭೇದಗಳಾಗಿ ವಿಂಗಡಿಸಲಾಗಿದೆ: ಉತ್ತರ ಭಾರತೀಯ, ದಕ್ಷಿಣ ಭಾರತೀಯ ಮತ್ತು ಮದ್ರಾಸ್ ಪ್ರಕಾರ.  ಉತ್ತರ ಮತ್ತು ದಕ್ಷಿಣ ಭಾರತದ ಪ್ರಭೇದಗಳು ಹೆಚ್ಚು ಭಿನ್ನವಾಗಿರುವುದಿಲ್ಲ.  ಕೇವಲ ಬಾಚಣಿಗೆ, ಕೊಕ್ಕಿನ ಆಕಾರ ಮತ್ತು ದೇಹದ ಆಕಾರ ಮಾತ್ರ ಭಿನ್ನವಾಗಿರುತ್ತದೆ.  ಉದಾಹರಣೆಗೆ: ಉತ್ತರ ಪ್ರಕಾರ = ತೆಳ್ಳಗೆ, ದಕ್ಷಿಣದ ಪ್ರಕಾರ = ಭಾರವಾದ ನಿರ್ಮಾಣ.  ಆದಾಗ್ಯೂ ಮದ್ರಾಸ್ ಅಸಿಲ್ ಗಮನಾರ್ಹವಾಗಿ ಭಿನ್ನವಾಗಿದೆ.  ಅವರು ಕಡಿಮೆ ನಿಲ್ದಾಣವನ್ನು ಹೊಂದಿದ್ದಾರೆ, ಭಾರವಾದ ನಿರ್ಮಾಣ ಮತ್ತು ಬಲವಾದ ಬೋನ್.  ಈ ಪಕ್ಷಿಗಳು ಹೆಚ್ಚಾಗಿ ನೀಲಿ ಬಣ್ಣದಲ್ಲಿ ಬರುತ್ತವೆ.  ಈ ವಿಧವು ಭಾರತದ ಆಳವಾದ ದಕ್ಷಿಣ, ತಮಿಳುನಾಡು ರಾಜ್ಯದಲ್ಲಿ ಕಂಡುಬರುತ್ತದೆ.

ಹೆಚ್ಚಿನ ಮಾಹಿತಿಗಾಗಿ  :ಗೂಗಲ್ ಮ್ಯಾಪ್
ಮರಿಗಳಿಗಾಗಿ ಸಂಪರ್ಕಿಸಿ:ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಹೆಸರುಘಟ್ಟ
 ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಹೆಸರುಘಟ್ಟ
ಯ ಭೇಟಿ ಮಾಡಿದಾಗ ತೆಗೆದ ಭಾವಚಿತ್ರ ಎಮು ಪಕ್ಷಿ 
    ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ 1 ಗೇಟ್ ಮುಂಬಾಗ  ಮಾದರಿ ಕೋಳಿ ಸಾಕಣೆ

ಅಣಬೆ ಕೃಷಿ

ಅಣಬೆ ಸಸ್ಯವರ್ಗಕ್ಕೆ ಸೇರಿದ ಶಿಲೀಂದ್ರ. ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಅಣಬೆಯನ್ನು ತರಕಾರಿ ಎಂದು ಗುರುತಿಸಲಾಗುತ್ತದೆ. ಇದೊಂದು ಉತ್ತಮ ಆಹಾರ. ಹಲವಾರು ವಿಧದ ಅಣಬೆಗಳನ್ನು ನಾವು ಕಾಣಬಹುದು. ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿವೆ. ಇನ್ನೂ ಕೆಲವು ವಿಷಪೂರಿತವಾಗಿರುತ್ತವೆ. ಇದರಲ್ಲಿ ಪ್ರೊಟೀನ್, ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆಯಿರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ. ಅಣಬೆ ಹೆಚ್ಚು ಮೃದುವಾಗಿರುವುದರಿಂದ ಎಲ್ಲಾ ವಿಧದ ಮಸಾಲೆ ಪರಿಮಳವನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ. ಹಾಗಾಗಿ ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಹುದು. ಅತ್ಯಧಿಕ ಪ್ರೊಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.

ಅಣಬೆ ಕೃಷಿಯ ವಿಧಾನಸಂಪಾದಿಸಿ

ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅತ್ಯವಶ್ಯಕ. ಹಾಗಾಗಿ ಭತ್ತದ ಹುಲ್ಲು ಲಭ್ಯವಿರುವ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು, ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು. ಈ ಕೃಷಿಯ ಬಗ್ಗೆ ತೋಟಗಾರಿಕಾ ಇಲಾಖೆ ಕೂಡಾ ತರಬೇತಿ ನೀಡುತ್ತದೆ. ವರ್ಷವಿಡೀ ಅಣಬೆ ಬೆಳೆಯನ್ನು ಬೆಳೆಯಬಹುದು. ಅಣಬೆ ಕೃಷಿಯನ್ನು ಒಳಾಂಗಣದಲ್ಲಿ ಮಾಡಬೇಕಾಗುತ್ತದೆ. ಆಯಿಸ್ಟರ್ ಅಣಬೆ ಭಾರತದಲ್ಲಿ ಬೆಳೆಯಲು ಸೂಕ್ತವಾಗಿದೆ. ಉಳಿದಂತೆ ಬಿಳಿ ಅಣಬೆ ಅಥವಾ ಯುರೋಪಿನ ಅಣಬೆ, ಕಪ್ಪೆ ಚಿಪ್ಪಿನ ಅಣಬೆ ಅಥವಾ ಡಿಗ್ರಿ ಅಣಬೆ, ಬತ್ತದ ಹುಲ್ಲಿನ ಅಣಬೆ ಈ ಮೂರೂ ಗುಂಪಿಗೆ ಸೇರಿದ ಎಲ್ಲಾ ಅಣಬೆ ತಳಿಗಳನ್ನು ಬೆಳೆಯಬಹುದು. ಇದರಲ್ಲೂ ಕಪ್ಪೆ ಚಿಪ್ಪಿನ ಅಣಬೆಯನ್ನು ಬೆಳೆಸುವುದು ಅತಿ ಸುಲಭ. ಇದಕ್ಕೆ ೨೨ ಡಿಗ್ರಿ ಸೆಲ್ಶಿಯಸ್‌ನಿಂದ ೩೦ಡಿಗ್ರಿ ಸೆಲ್ಶಿಯಸ್‌ವರೆಗಿನ ಎಲ್ಲಾ ಹವಾಮಾನವನ್ನು ಹೊಂದಿಕೊಂಡು ಬೆಳೆಯವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಮೊದಲು ಬತ್ತದ ಹುಲ್ಲನ್ನು ೪ರಿಂದ ೫ ಸೆಂ.ಮೀ. ಉದ್ದದ ತಂಡುಗಳಾಗಿ ಕತ್ತರಿಸಿ ಸುಮಾರು ೩ರಿಂದ ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಹುಲ್ಲಿನಲ್ಲಿರುವ ನೀರನ್ನೆಲ್ಲಾ ಬಸಿದು ಕುದಿಯುವ ನೀರಿನಲ್ಲಿ ೨ ಗಂಟೆಗಳ ಕಾಲ ನೆನೆಸಬೇಕು. ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದನ್ನು ಒಣಗಿಸಿ ಹೆಚ್ಚಿನ ನೀರಿನ ಅಂಶವನ್ನು ತೆಗೆಯಬೇಕು.[೧] ಒಣಗಿದ ಹುಲ್ಲನ್ನು ಪಾಲಿಥೀನ್ ಚೀಲಗಳಿಗೆ ತುಂಬಬೇಕು, ಒಂದು ಚೀಲಕ್ಕೆ ಒಂದು ಕೆ.ಜಿ.ಯಷ್ಟು ಹುಲ್ಲು ಹಾಗೂ ೫೦೦ ಗ್ರಾಮ್ ಅಣಬೆ ಬೀಜವನ್ನು ಹಂತ ಹಂತವಾಗಿ ಸಮಾನಾಗಿ ಹರಡಿ ತಂಬಬೇಕು. ಚೀಲದ ಬಾಯನ್ನು ಭದ್ರವಾಗಿ ಕಟ್ಟಬೇಕು. ನಂತರ ಚೀಲಗಳನ್ನು ತಂಪಾಗಿರುವ ಸ್ಥಳದಲ್ಲಿ ೨೦ರಿಂದ ೩೦ ದಿನಗಳ ಕಲ ಇಡಬೇಕು. ಆಗ ಅಣಬೆ ಬೀಜ ಮೊಳಕೆಯೊಡೆದು ಬೆಳೆದಿರುತ್ತದೆ. ಚೀಲಗಳಿಗೆ ಬ್ಲೇಡ್‌ನಿಂದ ರಂಧ್ರಗಳನ್ನು ಮಾಡಬೇಕು. ದಿನಕ್ಕೆ ೨ರಿಂದ ೩ ಬಾರಿ ನೀರು ಚಿಮುಕಿಸುತ್ತಿರಬೇಕು. ಚೀಲಕ್ಕೆ ರಂಧ್ರಗಳನ್ನು ಮಾಡಿದ ಒಂದು ವಾರದ ಒಳಗೆ ಹುಲ್ಲಿನ ಪಿಂಡಿಯ ಸುತ್ತಲೂ ಅಣಬೆ ಕಾಣಸಿಗುತ್ತದೆ. ಪ್ರತಿ ೩ ದಿನಕ್ಕೊಮ್ಮೆ ಅಣಬೆ ಕೊಯಿಲು ಮಾಡಬಹುದು.[೨]

ಅಣಬೆಯನ್ನು ಶೇಖರಿಸಿಡುವ ಕ್ರಮಸಂಪಾದಿಸಿ

ಕೃತಕವಾಗಿ ಅಣಬೆಯನ್ನು ಬಹಳ ದಿನಗಳವರೆಗೆ ಶೇಖರಿಸಿ ಇಡಬಹುದು. ಒಣಗಿಸಬೇಕಾಗಿರುವ ಅಣಬೆಯನ್ನು ತೊಟ್ಟು ಸಮೇತ ಕತ್ತರಿಸಿ ಚೆನ್ನಾಗಿ ತೊಳೆದು ೫ ನಿಮಿಷಗಳವರೆಗೆ ಹಬೆಯಲ್ಲಿ ಅಥವಾ ಕುದಿಯುವ ನೀರಿನಲ್ಲಿ ಬ್ಲಾಂಚ್ ಮಾಡಬೇಕು. ಸೂರ್ಯನ ಶಾಖದಿಂದ ಅಥವಾ ಡ್ರಯರ್ ಮೂಲಕವೂ ಅಣಬೆಯನ್ನು ಒಣಗಿಸಬಹುದು. ಆದರೆ ಸೂರ್ಯನ ಶಾಖದೊಂದಿಗೆ ಒಣಗಿಸಿದಂತಹ ಅಣಬೆಯನ್ನು ೫೫ರಿಂದ ೬೦ ಡಿಗ್ರಿ ಸೆಲ್ಶಿಯಸ್ ಉಷ್ಣಾಂಶದಲ್ಲಿ ೬ ಗಂಟೆಗಳ ಕಾಲ ಓವನ್‌ನಲ್ಲಿ ಇಟ್ಟು ಪ್ಯಾಕ್ ಮಾಡಬೇಕು. ಹಣ್ಣು ಮತ್ತು ತರಕಾರಿಗಳನ್ನು ಒಣಗಿಸಲು ಉಪಯೋಗಿಸುವ ಕ್ಯಾಬಿನೆಟ್ ಡ್ರೆöÊಯರ್‌ಗಳನ್ನು ಉಪಯೋಗಿಸಿ ಅಣಬೆಯನ್ನು ಒಣಗಿಸಬಹುದು.

ಅಣಬೆಯ ಉಪಯೋಗಗಳುಸಂಪಾದಿಸಿ

ಅಣಬೆಯಿಂದ ವಿವಿಧ ಬಗೆಯ ಆಹಾರ ತಯಾರಿಸಬಹುದು. ಇದನ್ನು ಹಸಿಯಾಗಿಯೇ ನಾನಾ ರೀತಿಯ ಅಡುಗೆಯಲ್ಲಿ ಬಳಸಬಹುದು. ಅಣಬೆಯಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳು ಇರುವುದರಿಂದ ನೀರಿನಲ್ಲಿ ೨೦ ನಿಮಿಷ ಬೇಯಿಸಿ ಕುಡಿಯಬಹುದು. ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸೊಕೊಂಡು ಕುಡಿಯಬಹುದು. ಅನ್ನ, ರಸಂ, ತರಕಾರಿ ಹೀಗೆ ಯಾವುದೇ ಬಗೆಯ ಅಡುಗೆಯಲ್ಲಾದರು ಪುಡಿ ಬೆರಸಬಹುದು. ಶೇಂಗಾಎಳ್ಳು ಮುಂತಾದ ಬಗೆಬಗೆಯ ಚಟ್ನಿ ಪುಡಿಗಳಲ್ಲೂ ಅಣಬೆ ಬೆರೆಸಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ.[೩]

ಅಣಬೆ ಕೃಷಿಗೆ ಮನ್ನೆಚ್ಚರಿಕಾ ಕ್ರಮಗಳುಸಂಪಾದಿಸಿ

ಅಣಬೆ ಕೃಷಿ ಮಾಡುವಾಗ ಹೊಸ ಕಚ್ಛಾ ವಸ್ತುಗಳನ್ನು ಬಳಸಬೇಕು. ಉತ್ತಮ ಬೆಳೆಗಾಗಿ ನೀರಿನ ನಿರ್ವಹಣೆ ಮಹತ್ತರವಾಗಿದೆ. ಅಣಬೆ ಕೃಷಿಯ ವೇಳೆ ಶುಚಿತ್ವ ಕಾಪಾಡಬೇಕು. ಅಣಬೆ ಬೆಳೆಯುವ ಕೋಣೆಗೆ ವಾರಕ್ಕೊಮ್ಮೆ ಪಾರ್ಮಾಲ್ಡಿಹೈಡ್ ಮತ್ತು ಡೈಕ್ಲೊರೋವಾಸ್ ಸಿಂಪಡಿಸಬೇಕು. ಕಿಟಕಿ ಬಾಗಿಲುಗಳಿಗೆ ತಂತಿಯ ಬಲೆಗಳನ್ನು ಅಳವಡಿಸಿ ಕೋಣೆಗೆ ಇಲಿ ಮತ್ತು ನೊಣ ಪ್ರವೇಶಿಸದಂತೆ ಎಚ್ಚರ ವಹಿಸಬೇಕು. ಒಂದು ಬೆಳೆಯಿಂದ ಇನ್ನೊಂದಕ್ಕೆ ಕನಿಷ್ಟ ೩ ದಿನಗಳ ಅಂತರವಿಡುವುದರಿಂದ ಬೆಳೆ ಕಲುಷಿತಗೊಳ್ಳುವುದನ್ನು ತಡೆಯಬಹುದು.

.

ಭಾರತದಲ್ಲಿ ಅಣಬೆ ಕೃಷಿಸಂಪಾದಿಸಿ

ಇತ್ತಿÃಚಿನ ದಿನಗಳಲ್ಲಿ ಅಣಬೆ ಕೃಷಿ ಭಾರತದಲ್ಲಿ ಜನಪ್ರಿಯತೆ ಪಡೆಯುತ್ತಿದ್ದರೂ ಇತರೇ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಅಣಬೆ ಕೃಷಿಯ ಪ್ರಮಾಣ ತೀರಾ ಕಡಿಮೆ. ಇದಕ್ಕೆ ವಾಣಿಜ್ಯ ಬೆಳೆಯಾಗುವ ಎಲ್ಲಾ ಅವಾಕಾಶಗಳು ಇದ್ದರೂ ಇದರ ಕೃಷಿ ಹೆಚ್ಚುತ್ತಿಲ್ಲ. ಭಾರತದಲ್ಲಿ ಅಣಬೆ ಕೃಷಿಯ ಬಗ್ಗೆ ದೊರೆಯುತ್ತಿರುವ ಮಾಹಿತಿ ಕಡಿಮೆ. ಜೊತೆಗೆ ಬಿತ್ತನೆ ಬೀಜಗಳು ಹೇರಳವಾಗಿ ಸಿಗುವುದಿಲ್ಲ. ಅಣಬೆಗೆ ಮಾರುಕಟ್ಟೆಯಿಲ್ಲ ಎಂಬ ಆತಂಕವೂ ಜನರನ್ನು ಕಾಡುತ್ತಿದೆ. ಹಾಗಾಗಿ ಭಾರತದಲ್ಲಿ ಅಣಬೆ ಬೇಸಾಯದ ಬಗ್ಗೆ ಜಾಗೃತಿ ಮೂಡಬೇಕಿದೆ. ಅಣಬೆ ಕೃಷಿಗೆ ಪೂರಕವಾಗುವ ‘ರೆಡಿ ಟು ಫ್ರೂಟ್ ಬ್ಯಾಗ್’ಗಳು ಜನಸಾಮಾನ್ಯರಗೆ ಸಿಗುವಂತಾಗಬೇಕು.[೪] ಅಣಬೆಗೆ ವ್ಯವಸ್ಥಿತ ಮಾರುಕಟ್ಟೆ ದೊರಕಿದರೆ, ಇದರ ಕೃಷಿಯಲ್ಲಿಯೂ ಅಭಿವೃದ್ಧಿ ಕಾಣಬಹುದು

ಕೃಪೆ :ವಿಕಿಪೀಡಿಯಾ

ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ನರೇಗಾ ಯೋಜನೆಯ ಅಡಿಯಲ್ಲಿ ಸಹಾಯಧನ


ಅಣಬೆ ಬೀಜಗಳು :ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು ಅಥವಾ ತೋಟಗಾರಿಕೆ ಇಲಾಖೆ, ಹುಳಿಮಾವು, ಬೆಂಗಳೂರು ಇವರಲ್ಲಿ ಲಭ್ಯ. ತಾವು ಮುಂಚಿತವಾಗಿಯೇ ಆರ್ಡರ್‌ ಕೊಡಬೇಕಾಗುತ್ತದೆ. ಅಲ್ಲದೇ ಅಣಬೆ ಬೇಸಾಯದ ತರಬೇತಿ ಪಡೆಯುವುದು ಅವಶ್ಯ. ತರಬೇತಿಗಾಗಿ ತೋಟಗಾರಿಕೆ ಇಲಾಖೆ, ಹುಳಿಮಾವು, ದೂ. 080-26582775, 26584904, 26582784 ಇಲ್ಲಿ ಸಂಪರ್ಕಿಸಬಹುದು. ಬೆಂಗಳೂರಿನ ಐಐಎಚ್‌ಆರ್‌ ಮಶ್ರೂಮ್‌ ರಿಸರ್ಚ್‌ ಲ್ಯಾಬೋರೇಟರಿಯಲ್ಲಿ 3ರಿಂದ 5 ದಿನಗಳ ತರಬೇತಿ ಲಭ್ಯವಿದೆ. ವಿವರಗಳಿಗಾಗಿ ವೆಬ್‌ಸೈಟ್‌www.iihr.res.in ಈ ಮೇಲ್‌ mushroomiihr@gmail.com ದೂ. 080-23086100 ವಿಸ್ತರಣೆ 348/349, ಮೊ.7090949605 ಗೆ ಕರೆಮಾಡಿ

 ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...