ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ
ಮಾಗಡಿ ತಾಲೂಕು ಸೋಲೂರು ಹೋಬಳಿ ಬಾಣವಾಡಿ ಗ್ರಾಮದ ಕೆರೆ ಕೋಡಿ ಬಸವಣ್ಣ ದೇವಸ್ಥಾನದ ಹಿಂಭಾಗದಲ್ಲಿ ಗಾಣದಲ್ಲಿ ಧಾನ್ಯಗಳನ್ನು ಅರೆಯುತ್ತಾ, ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ ಉತ್ಪಾದಿಸುವ ಪ್ರಕ್ರಿಯೆಯೊಂದು ಅಲ್ಲಿ ಆರಂಭವಾಗಿದೆ.
ಶೇಂಗಾ (ಕಡಲೆಕಾಯಿ), ಕೊಬ್ಬರಿ, ಅಗಸೆ ಹುಚ್ಚೆಳ್ಳು ಎಳ್ಳು ಕುಸುಬೆಯಂತಹ ಎಣ್ಣೆಗಳ ಪರಿಮಳ ಗಾಣವಿರುವ ಜಾಗ ಬಾಣವಾಡಿ ಕೋಡಿ( ಕೋಡಿ ಬಸವೇಶ್ವರ ದೇವಸ್ಥಾನದ ಹಿಂಭಾಗ) ತೆಂಗಿನ ಗರಿಯ ಸೂರಿನ ಕೆಳಗೆ ಜೋಡೆತ್ತುಗಳನ್ನು ಕಟ್ಟಿ ಗಾಣ ತಿರುಗಿಸುತ್ತಿರುವ ಹಾಗೂ ಗಾಣದ ಒರಳಿನಲ್ಲಿ, ಹಿಂಡಿ ತೆಗೆಯುತ್ತಾ, ಎಣ್ಣೆ ಸಂಗ್ರಹಿಸುತ್ತಿರುವ ದೃಶ್ಯ ಕಾಣುತ್ತದೆ.
ಆಹಾರ ಕಲಬೆರಕೆ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಕಂಡು ಬೇಸತ್ತಿದ್ದ ಜನರಿಗೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನಿಸಿತು. ಇನ್ನೊಂದೆಡೆ ದೇಸಿ ತಳಿಗಳು, ಸಾಂಪ್ರದಾಯಿಕ ಕೃಷಿ ವಿಧಾನಗಳು ಅಳಿವಿನಂಚಿಗೆ ಸರಿಯುತ್ತಿದ್ದದು ಮತ್ತಷ್ಟು ಕಾಡಿತು. ಇವೆರಡನ್ನೂ ಗಂಭೀರವಾಗಿ ಪರಿಗಣಿಸಿದ ಅವರು, ಆಹಾರ ಜಾಗೃತಿ ಮೂಡಿಸುತ್ತಾ, ದೇಸಿ ಆಹಾರ ಉತ್ಪಾದನೆಗೆ ಮುಂದಾದರು. ಅದರ ಮೊದಲ ಪ್ರಯತ್ನವಾಗಿ ಗಾಣದಿಂದ ಎಣ್ಣೆ ತೆಗೆಯುವ ಘಟಕ ಆರಂಭಿಸಿದರು.
ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಆಹಾರ ಧಾನ್ಯ ಬೆಳೆಸಲು ರೈತರನ್ನು ಉತ್ತೇಜಿಸುವುದು. ಅವರು ಬೆಳೆದ ಆಹಾರ ಧಾನ್ಯವನ್ನು ಖರೀದಿಸುವುದು. ಆ ಧಾನ್ಯಗಳನ್ನು ಬಳಸಿ ಗಾಣದಿಂದಲೇ ಅಡುಗೆ ಎಣ್ಣೆ ಉತ್ಪಾದಿಸಿ, ಗ್ರಾಹಕರಿಗೆ ತಲುಪಿಸುವುದು. ಈ ಮೂಲಕ ದೇಸಿ ತಳಿ ರಾಸುಗಳ ಪೋಷಣೆಗೆ ಉತ್ತೇಜನ, ಪರಿಶುದ್ಧ ಆಹಾರ ಜಾಗೃತಿ ಜತೆಗೆ ಗ್ರಾಮೀಣ ಯುವಕರಿಗೆ, ಅವರ ಗ್ರಾಮಗಳಲ್ಲೇ ಉದ್ಯೋಗ ಸಿಗುವುದಂತೆ ಮಾಡುವುದು- ಇಂಥ ಉದ್ದೇಶಗಳೊಂದಿಗೆ ಮುನ್ನಡೆದಿರುವ ಮಲ್ಲಿಕಾರ್ಜುನಯ್ಯ ರವರು ಸಾಂಪ್ರದಾಯಿಕ ರೀತಿಯಲ್ಲಿ ಶುದ್ಧ ಅಡುಗೆ ಎಣ್ಣೆ ಗಾಣವನ್ನು ಆರಂಭಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮಲ್ಲಿಕಾರ್ಜುನಯ್ಯ
+919449187046
ಕಿರಣ್
+918971109807
ಗೂಗಲ್ ಮ್ಯಾಪ್ ಸಹಾಯ ಇಲ್ಲಿ ಕ್ಲಿಕ್ ಮಾಡಿ