ಮಂಗಳವಾರ, ಸೆಪ್ಟೆಂಬರ್ 22, 2020

ಸರ್ಕಾರದ ನರೇಗಾ ಯೋಜನೆಯಡಿ ರಾಜ್ಯದ ಗ್ರಾಮ ಪಂಚಾಯಿತಿ ಗಳಲ್ಲಿ ದೊರೆಯುವ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ 

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನ್ರೇಗಾ) ಅಡಿಯಲ್ಲಿ ದೊರೆಯುವ ಸವಲತ್ತುಗಳು ಹಾಗೂ ಅನುದಾನ ಪ್ರಮಾಣ. ಎಲ್ಲಾ ಗ್ರಾಮೀಣ ಪ್ರದೇಶದ ಜನರು ತನಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದು, ತಮ್ಮ ವೈಯಕ್ತಿಕ ಹಾಗೂ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಿ.

ಕಾಮಗಾರಿ ಪಟ್ಟಿ ಮತ್ತು ಅನುದಾನ
ಹೆಚ್ಚಿನ ಮಾಹಿತಿಗಾಗಿ 

ನಿಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಥವಾ ಗ್ರಾಮ ಪಂಚಾಯಿತಿ   ಕಾಯಕ ಬಂದು ಅವರನ್ನು ಸಂಪರ್ಕಿಸಿ ಸೌಲಭ್ಯವನ್ನು ಪಡೆಯಿರಿ 

ಒಂದು ಕುಟುಂಬಕ್ಕೆ 100 ದಿನಗಳ ಕಡ್ಡಾಯ ಕೆಲಸ ಹೆಣ್ಣಾಗಲಿ ಗಂಡಾಗಲಿ ಸಮಾನ ವೇತನ

ಸೋಮವಾರ, ಸೆಪ್ಟೆಂಬರ್ 7, 2020

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಲ್ಲಿ ಆಡಿ ಮತ್ತು ಕುರಿ ಸಾಕಾಣಿಕೆಯ (10 ಆಡುಗಳಿಗೆ) ಶೆಡ್

ಮೇಕೆ ಸಾಕಾಣಿದಾರರಿಗೆ ಶೆಡ್‌ ನಿರ್ಮಾಣ

ಕೊರೊನಾ ಲಾಕ್‌ಡೌನ್‌ ಗ್ರಾಮೀಣ ಭಾಗದಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ಜೀವನ ನಿರ್ವಹಣೆಗೆ ಹಲವು ರೀತಿಯ ಸಮಸ್ಯೆಗಳನ್ನು ತಂದಿಟ್ಟಿದ್ದು ಸಾಕಷ್ಟು ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ನಡುವೆ ಸರಕಾರ ಕೆಲವೊಂದು ಕ್ಷೇತ್ರಗಳಲ್ಲಿ ಆರ್ಥಿಕ ಚಟುವಟಿಕೆಗಳ ಪ್ರೋತ್ಸಾಹಕ್ಕೆ ಕೈ ಜೋಡಿಸುತ್ತಿದ್ದು ಇದೀಗ ರಾಜ್ಯಾದ್ಯಂತ ಮೇಕೆ ಸಾಕಾಣಿದಾರರಿಗೆ ಶೆಡ್‌ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಎಲ್ಲ ಗ್ರಾಪಂಗಳ ಮೂಲಕ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ವೈಯುಕ್ತಿಕ ಆಧಾರಿತ ಕಾಮಗಾರಿ ಅಡಿಯಲ್ಲಿ ಆಡು(ಮೇಕೆ) ಸಾಕಾಣಿಕೆ ಶೆಡ್‌ ಕಟ್ಟಡ ನಿರ್ಮಾಣದ ಮಾದರಿ ಅಂದಾಜು ಪಟ್ಟಿಯನ್ನು ತಯಾರಿಸಿ ನಿಗಧಿತ ಹಣಕ್ಕೆ ಅನುಮೋದನೆ ಪಡೆದುಕೊಳ್ಳಲು ಸೂಚಿಸುವಂತೆ ಎಲ್ಲ ಜಿಪಂ ಸಿಇಒಗಳಿಗೆ ಆದೇಶ ರವಾನೆಯಾಗಿದೆ. ಶೆಡ್‌ ನಿರ್ಮಾಣದ ಅಡಿಪಾಯದಲ್ಲಿ ಸ್ಥಳಕ್ಕೆ ಅನುಗುಣವಾಗಿ ಆರ್‌ಸಿಸಿಯನ್ನು ಉಪಯೋಗಿಸಲು ಅವಕಾಶ ಕಲ್ಪಿಸಿರುವುದು ಒಂದೊಳ್ಳೆ ಸದಾವಕಾಶವಾಗಿದೆ.
ಎಷ್ಟು ಕೊಡ್ತಾರೆ
ಆಡು ಶೆಡ್‌ ನಿರ್ಮಾಣಕ್ಕೆ ಒಟ್ಟು 68 ಸಾವಿರ ಹಣ ನೀಡಲಿದ್ದು ಆಡು ಸಾಕಾಣಿದಾರರು ತಮ್ಮಲ್ಲಿರುವ ಸ್ಥಳದ ಅನುಕೂಲಕ್ಕೆ ತಕ್ಕಂತೆ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನ್ವಯ ಶೆಡ್‌ ಕಟ್ಟಡ ನಿರ್ಮಿಸಿಕೊಳ್ಳಬಹುದಾಗಿದೆ.
ವಲಸೆ ತಡೆಗೆ ಮನರೇಗಾ ಉದ್ಯೋಗ ಬಲ: ಸ್ವಗ್ರಾಮದಲ್ಲೇ ಕೆಲಸಕ್ಕೆ ಒಮ್ಮತದ ನಿರ್ಧಾರ

ಗ್ರಾಮೀಣ ರೈತರಿಗೆ ಬಂಪರ್‌
ಗ್ರಾಮೀಣ ಭಾಗದಲ್ಲಿ ಸಾಕಷ್ಟು ರೈತರಿಗೆ ಸ್ಥಳದ ಲಭ್ಯತೆ ಇದ್ದರೂ ಸೂಕ್ತ ಹಣಕಾಸಿನ ಸಹಾಯ ಇಲ್ಲದೆ ಶೆಡ್‌ ಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾಕಷ್ಟು ಮಂದಿ ರೈತರು ಮೇಕೆಗಳನ್ನು ತಮ್ಮ ಮನೆಯ ಹಿತ್ತಲು ಸೇರಿದಂತೆ ಅಲ್ಲಲ್ಲಿ ಕಟ್ಟಿಹಾಕಿಕೊಂಡು ಸಾಕಾಣಿಕೆ ಮಾಡುತ್ತಿದ್ದಾರೆ. ಇವರಿಗೆ ಈ ಯೋಜನೆ ಅನುಕೂಲ ಕಲ್ಪಿಸಲಿದೆ

ಕಳ್ಳರಿಂದ ಬಚಾವ್‌
ಲಾಕ್‌ಡೌನ್‌ ನಂತರ ಕುರಿ ಮೇಕೆಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಮೇಕೆ ಶೆಡ್‌ ನಿರ್ಮಾಣದಿಂದಾಗಿ ಮೇಕೆಗಳನ್ನು ರಕ್ಷಿಸಿಕೊಳ್ಳಬಹುದಾಗಿದೆ. ರಾತ್ರಿ ವೇಳೆ ಸೂಕ್ತ ಭದ್ರತೆಯಿಲ್ಲದೆ ಮನೆಯ ಮುಂಭಾಗದಲ್ಲಿ ಕಟ್ಟಿಹಾಕಿರುವ ಮೇಕೆಗಳನ್ನು ಟಾಟಾ ಏಸ್‌ ನಂಥ ವಾಹನಗಳಲ್ಲಿ ಬಂದು ಸದ್ದಿಲ್ಲದೆ ತುಂಬಿಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿವೆ. ಶೆಡ್‌ ನಿರ್ಮಾಣವಾದರೆ ಅವುಗಳನ್ನು ಕಳ್ಳರಿಂದ ರಕ್ಷಣೆ ಮಾಡಲು ಸಾಧ್ಯವಾಗಲಿದೆ.

ಕೃಪೆ ವಿಜಯ ಕರ್ನಾಟಕ


ಶನಿವಾರ, ಸೆಪ್ಟೆಂಬರ್ 5, 2020

ಎರೆಹುಳು (Earthworm) ನಿಸರ್ಗವೇ ಸೃಷ್ಟಿಸಿರುವ ನೇಗಿಲು

" ಎರೆಹುಳು ನಿಸರ್ಗವೇ ಸೃಷ್ಟಿಸಿರುವ ನೇಗಿಲು ಎರೆಹುಳು (Earthwormನಿಸರ್ಗವೇ ಸೃಷ್ಟಿಸಿರುವ ನೇಗಿಲು " ಎಂದವರು ಈ ಜಗತ್ತು ಕಂಡ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್.   ಎರೆಹುಳುಗಳಿರುವ ಮಣ್ಣು ಆರೋಗ್ಯವಾಗಿಯೂ - ಫಲವತ್ತಾಗಿಯೂ ಇರುತ್ತದೆ. ಇಂತಹ ಮಣ್ಣಲ್ಲಿ ಬೆಳೆದ ಗಿಡಗಳಿಂದ ಸಿಗುವ ಆಹಾರ ಪೌಶ್ಟಿಕವಾಗಿಯೂ, ರುಚಿಯಾಗಿಯೂ ಇರುತ್ತದೆ.  

" ನಮ್ಮ ಜಗತ್ತಿನ ಇತಿಹಾಸದಲ್ಲಿ ಎರೆಹುಳುಗಳು ಹಾಗೂ ಇನ್ನಿತರ ಕೆಲವು ಮಣ್ಣು ಜೀವಿಗಳು ಪ್ರಮುಖ ಪಾತ್ರ ವಹಿಸಿವೆ " ಎಂದು ಚಾರ್ಲ್ಸ್ ಡಾರ್ವಿನ್  ತಾವು ಬರೆದಿರುವ "The Formation of Vegatable Mould through the Action of Worms"  ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.  

ಅವರು ಹೀಗೆ ಹೇಳಿ ಸುಮಾರು 135 ವರ್ಷಗಳೇ ಕಳೆದಿವೆ. ಈಗಲೂ ಸಹ ಈ ಜೀವಿಗಳು ಮಾನವ ಕುಲಕ್ಕೆ ದಣಿವರಿಯದೆ ಮಾತೆಯಾಗಿ ಸಲ್ಲಿಸುತ್ತಿರುವ ಸೇವೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. 

ಮಣ್ಣಲ್ಲಿರುವ ಎರೆಹುಳು ಹಾಗೂ ಮತ್ತಿತರ ಜೀವಾಣುಗಳು ಬರಿಯ ಆಹಾರೋತ್ಪಾದನೆಯನ್ನಷ್ಟೇ ಮಾಡುವುದಿಲ್ಲ.  ಮಣ್ಣಲ್ಲಿ ಬೆರೆತ ಸಾವಯವ ಅಂಶವನ್ನು ವಿಘಟಿಸಿ - ಕೊಳೆಯಿಸಿ - ಕ್ರಮೇಣ ಅವುಗಳನ್ನು ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ.  ಬೀಳುವ ಮಳೆನೀರನ್ನು ಸಂಗ್ರಹಿಸಿ -   ಸೋಸಿ ಕುಡಿಯಲು ಯೋಗ್ಯವಾಗಿರುವಂತೆ ಮಾಡುತ್ತವೆ.   ಹಾಗೆಯೇ  ಅತೀ ಹೆಚ್ಚು ಪ್ರಮಾಣದಲ್ಲಿ ಇಂಗಾಲಾಂಶವನ್ನು ವಾತಾವರಣದಿಂದ ಹೀರಿಕೊಳ್ಳುತ್ತಾ ಮಣ್ಣಿಗೆ ಬೆರೆಸುತ್ತವೆ. ಮಣ್ಣಲ್ಲಿ ಇಂಗಾಲಾಂಶವಿದ್ದಾಗ, ಮಣ್ಣಲ್ಲಿ  ಗಾಳಿ ಮತ್ತು  ನೀರಿನ ಪ್ರಮಾಣ ಹೆಚ್ಚುತ್ತದೆ.  ಜೊತೆಗೆ  ಹತ್ತು ಹಲವು ಕಾಡುಪ್ರಾಣಿಗಳ ಪ್ರಮುಖ ಆಹಾರ ಮೂಲವಾಗಿಯೂ ಬೆಳೆಯುತ್ತದೆ.  

ಎರೆಹುಳು

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...