ಗುರುವಾರ, ಅಕ್ಟೋಬರ್ 8, 2020

ಜೇನು ಕೃಷಿ



ಜೇನುಕೃಷಿ


ಪ್ರತಿ ನೂರು ಗ್ರಾಂ ಜೇನಿನಲ್ಲಿರುವ ಪೋಷಕಾಂಶಗಳ ವಿವರ ಇಂತಿದೆ :

ಪೋಷಕಾಂಶಪರಿಮಾಣ
ಚೈತನ್ಯ (kJ)1272
ಪ್ರೊಟೀನ್0.3 g
ಕೊಬ್ಬು0 g
ಶರ್ಕರಪಿಷ್ಟಗಳು82.4 g
- ಸಕ್ಕರೆಗಳು82.12 g
- ನಾರು0.2 g
ಸೋಡಿಯಮ್ (ಮಿ.ಗ್ರಾ.)4
ಪೊಟ್ಯಾಸಿಯಂ (ಮಿ.ಗ್ರಾ.)52
ವಿಟಮಿನ್ ಸಿ (ಮಿ.ಗ್ರಾ.)0.5
ರಿಬೋಫ್ಲಾವಿನ್ (ಮಿ.ಗ್ರಾ.).038
ನಿಯಾಸಿನ್ (ಮಿ.ಗ್ರಾ.).121
ಪಾಂಟೋಥೆನಿಕ್ (ಮಿ.ಗ್ರಾ.).068
ಫೊಲೇಟ್ (ಮೈಕ್ರೋ ಗ್ರಾಂ)2
ಕಬ್ಬಿಣ (ಮಿ.ಗ್ರಾ.).42
ಮೆಗ್ನೀಸಿಯಮ್ (ಮಿ.ಗ್ರಾ.)2
ರಂಜಕ (ಮಿ.ಗ್ರಾ.)4
ಸತುವು (ಮಿ.ಗ್ರಾ.).22
ಕ್ಯಾಲ್ಸಿಯಮ್ (ಮಿ.ಗ್ರಾ.)6
ವಿಟಮಿನ್ ಬಿ೬ (ಮಿ.ಗ್ರಾ.).024
ನೀರು17.10 g

ರಾಸಾಯನಿಕವಾಗಿ ಜೇನು ಹಲವು ಸಕ್ಕರೆಗಳು ಮತ್ತು ಇತರ ಸಂಯುಕ್ತಗಳನ್ನು ಹೊಂದಿರುತ್ತದೆ. ಜೇನಿನಲ್ಲಿರುವ ಶರ್ಕರಪಿಷ್ಟಗಳ ಪೈಕಿ ಫ್ರುಕ್ಟೋಸ್ ಮತ್ತು ಗ್ಲೂಕೋಸ್ ಹೆಚ್ಚಾಗಿರುತ್ತವೆ. ಉಳಿದಂತೆ ಜೇನು ಅಲ್ಪ ಪ್ರಮಾಣದಲ್ಲಿ ಹಲವು ವಿಟಮಿನ್ ಗಳು ಮತ್ತು ಖನಿಜಗಳನ್ನು ಸಹ ಹೊಂದಿದೆ. ಯಾವುದೇ ಜೇನಿನ ರಾಸಾಯನಿಕ ಸಂಯೋಜನೆ ಆ ನೊಣಗಳಿಗೆ ಒದಗುವ ಹೂವುಗಳ ಜಾತಿ ಮತ್ತು ಪರಿಮಾಣಗಳನ್ನು ಅವಲಂಬಿಸಿರುತ್ತದೆ. ಜೇನಿನ ಸಾಮಾನ್ಯ ಸಂಯೋಜನೆ ಕೆಳಕಂಡಂತಿರುವುದು :

  • ಫ್ರುಕ್ಟೋಸ್ : ೩೮%
  • ಗ್ಲೂಕೋಸ್ : ೩೧%
  • ಸುಕ್ರೋಸ್ : ೧%
  • ನೀರು : ೧೭%
  • ಇತರ ಶರ್ಕರಗಳು : ೯%
  • ಇತರ ವಸ್ತುಗಳು : ೩.೫೫%

ಪರಾಗಸ್ಪರ್ಶ:

 ಪರಾಗಗಳನ್ನು ತರುವ ಜೇನುನೋಣಗಳು ಅವುಗಳನ್ನು ತಮ್ಮ ಗೂಡುಗಳಲ್ಲಿ ಸಂಗ್ರಹಿಸುತ್ತವೆ. ಈ ಜೇನುನೊಣಗಳು ಮಕರಂದಕ್ಕಾಗಿ ಹಾರಾಡುವಾಗ ಪರಾಗಗಳು ಅವುಗಳಿಗೆ ಅಂಟಿಕೊಂಡಿರುತ್ತವೆ. ಬೇರೆಬೇರೆ ಹೂವಿನ ಮೇಲೆ ಕುಳಿತಾಗ ಹೂವಿನ ಶಲಾಕಾಗ್ರಗಳ ಮೇಲೆ ಬಿದ್ದು ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ. ಇದರ ಪ್ರಕ್ರಿಯೆಯಿಂದ ಕ್ಷೇತ್ರ ಮತ್ತು ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳವಾಗುತ್ತದೆ. ಅಡಿಕೆ-ತಾಳೆ ಮುಂತಾದ ತೋಟಗಾರಿಕೆ ಬೆಳೆಗಳಲ್ಲಿ ಹೊಂಬಾಳೆ ಬೀರಿದಾಗ ಗಂಡು ಹೂ ಸಾಕಷ್ಟು ಪರಾಗ ಉತ್ಪತ್ತಿ ಮಾಡುತ್ತದೆ. ಇದನ್ನು ಸಂಗ್ರಹಿಸಲು ಹೊಂಬಾಳೆಗಳಿಗೆ ಜೇನುನೊಣಗಳು ಮುತ್ತಿರುತ್ತವೆ. ಮಳೆಗಾಲದಲ್ಲಿ ಮಳೆ ಹುಯ್ದು ನಿಂತ ಬಳಿಕ ಮತ್ತು ಚಳಿಗಾಲದಲ್ಲಿ ಸೂರ್ಯೋದಯ ಆದ ನಂತರ ಇಬ್ಬನಿ ಆವಿಯಾಗುವ ಕಾಲಘಟ್ಟದಲ್ಲಿ ಜೇನುನೊಣಗಳು ಪರಾಗಕ್ಕಾಗಿ ಇಂಥ ಮರಗಳ ಬಳಿ ಗುಂಪುಗುಂಪಾಗಿ ಹಾರಾಡುತ್ತಿರುತ್ತವೆ.

ಪರಕೀಯ ಪರಾಗಸ್ಪರ್ಶದಿಂದ ಫಲಕಟ್ಟುವ ಮತ್ತು ಏಕಲಿಂಗ ಪುಷ್ಪಗಳಿಂದ ಕೂಡಿದ ಬೆಳೆಗಳಿಗೆ ಜೇನುನೊಣ ಪರಮಾಪ್ತ. ಈ ಎಲ್ಲ ಕಾರಣದಿಂದ ಹಾನಿಕಾರಕ ಕೀಟನಾಶಕಗಳನ್ನು ಕ್ಷೇತ್ರ ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಿಂಪಡಿಸಬಾರದು. ಕೀಟನಾಶಕಗಳ ಸಿಂಪಡಣೆ ಪರಿಸರದಲ್ಲಿರುವ ಜೀವಿಗಳಿಗೆ ಹಾನಿಕಾರಕ. ಜೊತೆಗೆ ಬೆಳೆಗೂ ಹಾನಿದಾಯಕ

ಜೇನು ಕೃಷಿ ನಿರ್ವಹಣೆ


ಜೇನು ಸಾಕಾಣಿಕೆ (ಜೇನು ಪೆಟ್ಟಿಗೆ ಇಡುವ) ಪ್ರಾರಂಭಿಸುವ ಒಂದು ಕಿ.ಮೀ. ಸುತ್ತಳತೆಯಲ್ಲಿ ಹೂ ಬಿಡುವ, ಸಸ್ಯ ಸಂಪತ್ತಿನ, ಮಾಲಿನ್ಯ ರಹಿತ ಗಾಳಿ, ನೀರು, ಮಳೆ, ಬಿಸಿಲಿನಿಂದ ರಕ್ಷಣೆ, ನೆರಳಿನ ಪ್ರದೇಶ ಆಯ್ಕೆ ಮಾಡಬೇಕು. ಜೇನು ಕುಟುಂಬಗಳನ್ನು ವಾರಕ್ಕೊಮ್ಮೆ ಪರೀಕ್ಷಿಸಬೇಕು, 10- 15 ದಿನಕ್ಕೊಮ್ಮೆ ಪೆಟ್ಟಿಗೆ ಸ್ವಚ್ಛಗೊಳಿಸಬೇಕು. ನಿಸರ್ಗದಲ್ಲಿ ಪರಾಗ ಮತ್ತು ಮಕರಂದದ ಪ್ರಮಾಣ ಕಡಿಮೆಯಾದರೆ ಸಕ್ಕರೆ ಪಾಕ ಒದಗಿಸಬೇಕು. ಮಳೆಗಾಲಕ್ಕೆ 10- 15 ದಿನಗಳ ಮೊದಲು ಜೇನು ತುಪ್ಪ ಸಂಗ್ರಹಿಸುವುದು ನಿಲ್ಲಿಸಬೇಕು. ಜೇನುಗಳು ಮಳೆಗಾಲ ಮುಗಿದು ಸಸ್ಯಗಳು ಹೂ ಬಿಡುವ ಸಮಯದಲ್ಲಿ ವಂಶಾಭಿವೃದ್ಧಿಗೆ ಗಮನ ಕೊಡಬೇಕಾಗುತ್ತೆ.

ಜೇನುನೊಣಗಳ ಅವನತಿಯಾದರೆ ಇಡೀ ಮಾನವ ಕುಲಕ್ಕೆ ಕಾದಿದೆ ಅಪಾಯ

ನಮ್ಮ ಜೀವಜಗತ್ತಿನಲ್ಲಿ ಅಸಂಖ್ಯಾತ ಜೀವಿಗಳಿದ್ದು, ಅವುಗಳಲ್ಲಿ ಅನೇಕ ಜೀವಿಗಳು ಈಗಾಗಲೇ ಅಳಿವಿನಂಚನ್ನು ತಲುಪಿದೆ. ಅಂತಹ ಜೀವಿಗಳ ಪಟ್ಟಿಯಲ್ಲಿ ಅತಿ ಶೀಘ್ರದಲ್ಲೇ ಹೊಸ ಜೀವಿಯೊಂದು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಆ ಜೀವಿ ಮತ್ತಾವುದೂ ಅಲ್ಲ, ನಮ್ಮೆಲ್ಲರಿಗೂ ಕೂಡಾ ಸಿಹಿಯಾದ ಜೇನನ್ನು ನೀಡುವ ಜೇನುನೊಣಗಳಾಗಿವೆ. ರಾಯಲ್ ಜಿಯಾಗ್ರಫಿ ಸೊಸೈಟಿ ಆಫ್ ಲಂಡನ್ ಸಭೆಯಲ್ಲಿ ಅರ್ಥ್ ವಾಚ್ ಸಂಸ್ಥೆಯು ಜೇನುನೊಣಗಳನ್ನು ಈ ಭೂಮಿಯ ಮೇಲಿರುವ ಅತ್ಯಂತ ಅಮೂಲ್ಯವಾದ ಜೀವ ಪ್ರಬೇಧವೆಂದು ಪ್ರದೇಶವೆಂದು ಘೋಷಣೆಯನ್ನು ಮಾಡಿದೆ‌. 2008ರಲ್ಲಿ ದಿ ಗಾರ್ಡಿಯನ್ ಕೂಡ ಇದೇ ಮಾತನ್ನು ಹೇಳಿದೆ ಎಂಬುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ವಿಶ್ವ ಜೇನುಹುಳುಗಳ ದಿನ ಮೇ 20

ಪರಾಗಸ್ಪರ್ಶಕ್ಕೆ ಮೂಲವಾದ ಜೇನುನೊಣಗಳನ್ನು  ಕಳೆದುಕೊಳ್ಳುವುದೆಂದರೆ ಎಲ್ಲಾ ರೀತಿಯ ಆಹಾರವನ್ನು ಕಳೆದುಕೊಳ್ಳುವುದು ಎಂದರ್ಥ.

👉ಒಟ್ಟಾರೆ ಸಸ್ಯಗಳಲ್ಲಿ 85% ಸಸ್ಯಗಳು ತಮ್ಮ ಪರಾಗಸ್ಪರ್ಶಕ್ಕೆ ಜೇನುನೊಣಗಳನ್ನು ಅವಲಂಬಿಸಿವೆ. ಆ ಮೂಲಕ ಅವುಗಳ ಪುನರುತ್ಪತ್ತಿ ಜೇನುಗಳ ಉಳಿವನ್ನು ಅವಲಂಬಿಸಿವೆ.
👉ನಮ್ಮ ಒಟ್ಟಾರೆ ಆಹಾರದ 1/3 ಭಾಗವು ಆಹಾರವು ವಿವಿಧ ಪರಾಗಸ್ಪರ್ಶಕಗಳ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅತಿ ಮುಖ್ಯ ಪರಾಗಸ್ಪರ್ಶಕ ಜೀವಿಯಾದ ಜೇನು ಆಹಾರ ಭದ್ರತೆಯ ಬೆನ್ನೆಲುಬು.


ಔಷಧೀಯ ಉಪಯೋಗಗಳುಸಂಪಾದಿಸಿ

ಬಲು ಹಿಂದಿನ ಕಾಲದಿಂದಲು ಸಹ ಜೇನನ್ನು ಸವರುವಿಕೆಯ ಮೂಲಕ ಅಥವಾ ಸೇವನೆಯ ಮೂಲಕ ಔಷಧವನ್ನಾಗಿ ಬಳಸಲ್ಪಡಲಾಗುತ್ತಿದೆ. ಜೇನು ನಂಜುವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಒಂದು ವರ್ಷದೊಳಗಿನ ಶಿಶುಗಳಿಗೆ ಜೇನನ್ನು ನೀಡುವುದು ಅಸಾಧುವೆಂದು ವೈದ್ಯಕೀಯ ಸಂಶೋಧನೆಗಳು ತಿಳಿಸುತ್ತವೆ.

ಹೆಚ್ಚಿನ ಮಾಹಿತಿಗಾಗಿ click

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ

ಪರಿಸರ ಸಂರಕ್ಷಣೆ ನಮ್ಮೆಲಲರ ಹೊಣೆ 01. ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ...