" ಎರೆಹುಳು ನಿಸರ್ಗವೇ ಸೃಷ್ಟಿಸಿರುವ ನೇಗಿಲು ಎರೆಹುಳು (Earthworm) ನಿಸರ್ಗವೇ ಸೃಷ್ಟಿಸಿರುವ ನೇಗಿಲು " ಎಂದವರು ಈ ಜಗತ್ತು ಕಂಡ ಮಹಾನ್ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್. ಎರೆಹುಳುಗಳಿರುವ ಮಣ್ಣು ಆರೋಗ್ಯವಾಗಿಯೂ - ಫಲವತ್ತಾಗಿಯೂ ಇರುತ್ತದೆ. ಇಂತಹ ಮಣ್ಣಲ್ಲಿ ಬೆಳೆದ ಗಿಡಗಳಿಂದ ಸಿಗುವ ಆಹಾರ ಪೌಶ್ಟಿಕವಾಗಿಯೂ, ರುಚಿಯಾಗಿಯೂ ಇರುತ್ತದೆ.
" ನಮ್ಮ ಜಗತ್ತಿನ ಇತಿಹಾಸದಲ್ಲಿ ಎರೆಹುಳುಗಳು ಹಾಗೂ ಇನ್ನಿತರ ಕೆಲವು ಮಣ್ಣು ಜೀವಿಗಳು ಪ್ರಮುಖ ಪಾತ್ರ ವಹಿಸಿವೆ " ಎಂದು ಚಾರ್ಲ್ಸ್ ಡಾರ್ವಿನ್ ತಾವು ಬರೆದಿರುವ "The Formation of Vegatable Mould through the Action of Worms" ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಅವರು ಹೀಗೆ ಹೇಳಿ ಸುಮಾರು 135 ವರ್ಷಗಳೇ ಕಳೆದಿವೆ. ಈಗಲೂ ಸಹ ಈ ಜೀವಿಗಳು ಮಾನವ ಕುಲಕ್ಕೆ ದಣಿವರಿಯದೆ ಮಾತೆಯಾಗಿ ಸಲ್ಲಿಸುತ್ತಿರುವ ಸೇವೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ.
ಮಣ್ಣಲ್ಲಿರುವ ಎರೆಹುಳು ಹಾಗೂ ಮತ್ತಿತರ ಜೀವಾಣುಗಳು ಬರಿಯ ಆಹಾರೋತ್ಪಾದನೆಯನ್ನಷ್ಟೇ ಮಾಡುವುದಿಲ್ಲ. ಮಣ್ಣಲ್ಲಿ ಬೆರೆತ ಸಾವಯವ ಅಂಶವನ್ನು ವಿಘಟಿಸಿ - ಕೊಳೆಯಿಸಿ - ಕ್ರಮೇಣ ಅವುಗಳನ್ನು ಪೋಷಕಾಂಶಗಳಾಗಿ ಪರಿವರ್ತಿಸುತ್ತವೆ. ಬೀಳುವ ಮಳೆನೀರನ್ನು ಸಂಗ್ರಹಿಸಿ - ಸೋಸಿ ಕುಡಿಯಲು ಯೋಗ್ಯವಾಗಿರುವಂತೆ ಮಾಡುತ್ತವೆ. ಹಾಗೆಯೇ ಅತೀ ಹೆಚ್ಚು ಪ್ರಮಾಣದಲ್ಲಿ ಇಂಗಾಲಾಂಶವನ್ನು ವಾತಾವರಣದಿಂದ ಹೀರಿಕೊಳ್ಳುತ್ತಾ ಮಣ್ಣಿಗೆ ಬೆರೆಸುತ್ತವೆ. ಮಣ್ಣಲ್ಲಿ ಇಂಗಾಲಾಂಶವಿದ್ದಾಗ, ಮಣ್ಣಲ್ಲಿ ಗಾಳಿ ಮತ್ತು ನೀರಿನ ಪ್ರಮಾಣ ಹೆಚ್ಚುತ್ತದೆ. ಜೊತೆಗೆ ಹತ್ತು ಹಲವು ಕಾಡುಪ್ರಾಣಿಗಳ ಪ್ರಮುಖ ಆಹಾರ ಮೂಲವಾಗಿಯೂ ಬೆಳೆಯುತ್ತದೆ.
ಎರೆಹುಳು